ಮಂಜು ಮತ್ತು ಚಳಿಯಿಂದ ಸಿಲುಕಿಕೊಂಡ ಪ್ರವಾಸಿಗರಿಗೆ ಮನೆ ಮತ್ತು ಮಸೀದಿಯಲ್ಲಿ ಆಶ್ರಯ ಒದಗಿಸಿದ ಕಾಶ್ಮೀರಿಗಳು

0
636

ಸನ್ಮಾರ್ಗ ವಾರ್ತೆ

ಶ್ರೀನಗರದಲ್ಲಿ ಈಗ ದಟ್ಟ ಮಂಜು. ತೀವ್ರ ಚಳಿ. ಆದರೆ ಈ ಚಳಿ ಮತ್ತು ಮಂಜಿನ ಸುಖವನ್ನು ಅನುಭವಿಸುವುದಕ್ಕೆ ಪ್ರವಾಸಿಗರು ಕುತೂಹಲದಿಂದ ಅಲ್ಲಿಗೆ ಧಾವಿಸುತ್ತಾರೆ. ಹೀಗೆ ಧಾವಿಸಿದವರು ಈ ಮಂಜು ಮತ್ತು ಚಳಿಗೆ ಸಿಲುಕಿ ಒದ್ದಾಡುತ್ತಾರೆ. ಇಂಥವರಿಗೆ ಕಾಶ್ಮೀರಿಗಳು ತಮ್ಮ ಮನೆಯಲ್ಲಿ ಮತ್ತು ಮಸೀದಿಯಲ್ಲಿ ತಂಗುವುದಕ್ಕೆ ಏರ್ಪಾಡು ಮಾಡುತ್ತಿದ್ದಾರೆ. ಕಾಶ್ಮೀರದ ಶ್ರೀನಗರದಲ್ಲಿ ಇಂಥದ್ದೇ ಒಂದು ಪ್ರೇಮಮಯಿ ಘಟನೆ ನಡೆದಿದೆ.

ದಿನಗಳ ಹಿಂದೆ ಶ್ರೀನಗರದಲ್ಲಿ ದಟ್ಟ ಮಂಜು ಆವರಿಸಿತ್ತು. ಅದರ ಜೊತೆಗೆ ಮಳೆಯೂ ಸುರಿಯತೊಡಗಿತು. ಇದರಿಂದಾಗಿ ಶ್ರೀನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಿಮಾನಗಳನ್ನು ಕೂಡ ರದ್ದು ಮಾಡಲಾಯಿತು. ಬಳಿಕ ಶ್ರೀನಗರ ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಯಿತು. ಇದರಿಂದಾಗಿ ನೂರಾರು ಪ್ರವಾಸಿಗರು ಸಿಲುಕಿ ಕೊಂಡರು. ಇವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಶ್ರೀನಗರದ ನಿವಾಸಿಗಳು ಆರೈಕೆ ಮಾಡಿದರು ತಮ್ಮ ಮನೆಯಲ್ಲಿ ಇರಿಸಿ ಅವರಿಗೆ ಆಹಾರ ಮತ್ತು ಮಲಗುವ ವ್ಯವಸ್ಥೆಯನ್ನು ಮಾಡಿದ್ದರು. ಹೊದಿಕೆಯನ್ನು ನೀಡಿದರು. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು.

https://x.com/MirwaizKashmir/status/1872904351729238164?t=0hqk1AJAaTn7QUXgtubxwQ&s=19