ಕೇರಳ: ರಾಜ್ಯಪಾಲರಿಗೆ ಕಪ್ಪು ಬಾವುಟ

0
963

ಸನ್ಮಾರ್ಗ ವಾರ್ತೆ-

ಕಣ್ಣೂರ್, ಡಿ. 28: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಕಣ್ಣೂರಿನಲ್ಲಿ ಕಪ್ಪು ಬಾವುಟ ತೋರಿಸಲಾಗಿದೆ. ಕಣ್ಣೂರ್ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮವೊಂದನ್ನು ಉದ್ಘಾಟಿಸಲು ಬಂದ ವೇಳೆ ಯುವ ಕಾಂಗ್ರೆಸ್, ಕೆಎಸ್‍ಯು ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದಾರೆ. ಕಾರ್ಯಕರ್ತರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಕಣ್ಣೂರಿನ ವಿಶ್ವವಿದ್ಯಾಲಯದ ತಾವಕ್ಕರ ಕ್ಯಾಂಪಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿಲು ರಾಜ್ಯಪಾಲರು ಬಂದಾಗ ದಾರಿಯಲ್ಲಿ ಪ್ರತಿಭಟನಾಕಾರರು ಕಪ್ಪು ಬಾವುಟ ತೋರಿಸಿದರು. ವಿಶ್ವವಿದ್ಯಾನಿಲಯ ಪರಿಸರದಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಎಂಎಸ್‍ಎಫ್ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿದರು. ಪೌರತ್ವ ಕಾನೂನು ಪರ ನಿಲುವು ವ್ಯಕ್ತಪಡಿಸಿದ್ದಕ್ಕೆ ರಾಜ್ಯಪಾಲರ ವಿರುದ್ಧ ಕಪ್ಪುಭಾವುಟ ತೋರಿಸಲಾಗುತ್ತಿದೆ.