ಸನ್ಮಾರ್ಗ ವಾರ್ತೆ
ಕಣ್ಣೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಕೋಮು ದ್ವೇಷ ಹರಡಿದ ಹಾಗೂ ಬಾಲಕಿಯೊಬ್ಬಳಿಗೆ ಲೈಂಗಿಕವಾಗಿ ನಿಂದಿಸಿದ ಆರ್ಎಸ್ಎಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕಣ್ಣೂರಿನ ಅಳಿಯೂರ್ ನಿವಾಸಿ ವಿಮಲ್ ಶಿವಶಕ್ತಿ ಬಂಧಿತ ಆರೋಪಿಯಾಗಿದ್ದಾನೆ. ಆನಂತರ ಆತನನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಎಸ್ಡಿಪಿಐ ಮುಳಕ್ಕುನ್ನು ಪಂಚಾಯತ್ ಜಂಟಿ ಕಾರ್ಯದರ್ಶಿ ಯೂನಸ್ ವಿಳಕ್ಕೋಡ್ ನೀಡಿದ ದೂರಿನ ಮೇರೆಗೆ ಈ ಬಂಧನ ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಬಾಲಕಿಯ ಫೋಟೋದ ಕೆಳಗೆ ಆತ ಕೋಮುವಾದಿ ಮತ್ತು ಲೈಂಗಿಕ ನಿಂದನಾತ್ಮಕ ಕಮೆಂಟ್ಗಳನ್ನು ಹಾಕಿದ್ದನು ಎನ್ನಲಾಗಿದೆ.
ಅಬಾಕಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಬಾಲಕಿಯ ಚಿತ್ರವನ್ನು ಎಸ್ಡಿಪಿಐ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿತ್ತು. ಅದರ ಕೆಳಗೆ ಈ ದ್ವೇಷದ ಪೋಸ್ಟ್ ಹಾಕಲಾಗಿತ್ತು. ನ್ಯಾಯಾಲಯವು ಆರೋಪಿಯನ್ನು ಎರಡು ವಾರಗಳ ಕಾಲ ರಿಮಾಂಡ್ಗೆ ಒಳಪಡಿಸಿದೆ.












