ಕುದ್ರೋಳಿ: ಬ್ರೈಟ್ ಮೊಡೆಲ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0
222

ಸನ್ಮಾರ್ಗ ವಾರ್ತೆ

ಕುದ್ರೋಳಿ : ಬ್ರೈಟ್ ಮೊಡೆಲ್ ಸ್ಕೂಲ್ ಕುದ್ರೋಳಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುದ್ರೋಳಿಯ ಕಾರ್ಪೊರೇಟರ್ ಶಂಶುದ್ದೀನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಂತರ ಇನ್ನೋರ್ವ ಮುಖ್ಯ ಅತಿಥಿ ಮುಸ್ಲಿಮ್ ಐಕ್ಯತಾ ವೇದಿಕೆಯ ಸಂಚಾಲಕರಾದ ಅಬ್ದುಲ್ ಅಝೀಝ್ ಶುಭ ಹಾರೈಸಿದರು. ಸ್ಥಳೀಯ ಮೀನು ಉದ್ಯಮಿ ಹಸನ್ ಮುಷ್ತಾಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆರಂಭದಲ್ಲಿ ವಿದ್ಯಾರ್ಥಿನಿ ಲಿಪ್ಹಾಮ್ ಕಿರಾಅತ್ ಪಠಿಸಿದರು. ಬಳಿಕ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ದೇಶ ಭಕ್ತಿ ಗೀತೆ ಹಾಡಿದರು. ಶಿಕ್ಷಕಿ ಅಮೃತ ಸ್ವಾಗತ ಹಾಗೂ ಪ್ರಸ್ತಾವಿಕ ಭಾಷಣ ಮಾಡಿದರು. ಶಾಲಾ ವಿದ್ಯಾರ್ಥಿ ನಾಯಕ ರಾಹಿಫ್ ರಿಝ್ವಾನ್ ಪ್ರತಿಜ್ಞೆ ವಾಚಿಸಿದರು. ASPL ತಹ್ಫೀಮ್ ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ Taikwondo ಕರಾಟೆ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿ ಮುಸ್ ಅಬ್ ರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಯ ಮತ್ತು ಸ್ಪರ್ಧೆಯ ವಿವರವನ್ನು ಮುಖ್ಯೋಪಾಧ್ಯಾಯಿನಿ ಕವಿತಾ ಜಲೇಂದ್ರ ಮಂಡಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಿಕ್ಷಕಿ ಮೆಹನಾಝ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಬ್ನಮ್ ಧನ್ಯವಾದವಿತ್ತರು.

ಇಸ್ಲಾಮಿಯಾ ಅಸೋಸಿಯೇಷನ್ ಕುದ್ರೋಳಿ ಇದರ ಅದ್ಯಕ್ಷರಾದ ಜಾವೇದ್ ಅಖ್ತರ್, ಕಾರ್ಯದರ್ಶಿ ಆಸಿಫ್ ಹುಸೈನ್, ಕರೆಸ್ಪಾಂಡೆಂಟ್ ಮುನವ್ವರ್ ಅಹ್ಮದ್, ಕಜಾಂಜಿ ಸಲೀಮ್ ಕೆ.ಕೆ. ಟ್ರಸ್ಟಿ ಅಮೀರ್ ಸಿದ್ದೀಕ್ ಮುಖ್ಯೋಪಾಧ್ಯಾಯಿನಿ ಕವಿತಾ ಜಲೇಂದ್ರ, PTA ಅಧ್ಯಕ್ಷ ಅಝೀಮ್ ನೈನಾರ್, PTA ಕಾರ್ಯದರ್ಶಿ ಅಶ್ರಫ್, ನಝೀರ್, ಅಬ್ದುಲ್ ಮಜೀದ್ HBT, ಶಿಕ್ಷಕರು, PTA ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.