ಕುದ್ರೋಳಿ ಮುಸ್ಲಿಂ ಐಕ್ಯತಾ ವೇದಿಕೆ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಯಾಸೀನ್ ಆಯ್ಕೆ

0
337

ಸನ್ಮಾರ್ಗ ವಾರ್ತೆ

ಮಂಗಳೂರು: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಇದರ ಮಹಾಸಭೆಯು ಕೆ. ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ನಂತರ ಮುಂದಿನ ಮೂರು ವರ್ಷಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಮುಹಮ್ಮದ್ ಯಾಸೀನ್, ಪ್ರಧಾನ ಕಾರ್ಯದರ್ಶಿ ಬಿ ಅಬೂಬಕ್ಕರ್, ಕೋಶಾಧಿಕಾರಿಯಾಗಿ ಮಕ್ಬೂಲ್ ಅಹ್ಮದ್ ಜಾಮಿಯಾ, ಉಪಾಧ್ಯಕ್ಷರಾಗಿ ಶಂಸ್ಸುದ್ದೀನ್ HBT, ನಾಸಿರ್ ಹೈಕೊ, S A ಖಲೀಲ್, ಮುಹಮ್ಮದ್ ಹಾರಿಸ್, ಉಮರ್ ಫಾರೂಕ್, ಸಂಚಾಲಕರಾಗಿ ಅಬ್ದುಲ್ ಅಝೀಝ್ ಕುದ್ರೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಮಕ್ಬುಲ್ ಅಹ್ಮದ್, ಮುಝೈರ್ ಕುದ್ರೋಳಿ, ಮಾದ್ಯಮ ಕಾರ್ಯದರ್ಶಿಯಾಗಿ N K ಅಬೂಬಕ್ಕರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ ಅಶ್ರಫ್ ಮಾಜಿ ಮೇಯರ್, ಅಬ್ದುಲ್ ಲತೀಫ್ ಕೆಕೆ, ಮುಸ್ತಾಕ್ ಅಹ್ಮದ್, ಇಸ್ಮಾಯಿಲ್, ಅಬ್ದುಲ್ ವಹಾಬ್ ಕುದ್ರೋಳಿ, ಅಬ್ದುಲ್ ಲತೀಫ್ ಕ್ರಿಸ್ಟಲ್, ಮುಹಮ್ಮದ್ ಇಕ್ಬಾಲ್, ಅಶ್ರಫ್ ಕಿನಾರ ರವರನ್ನು ಆಯ್ಕೆ ಮಾಡಲಾಯಿತು.