ಕಬರಸ್ತಾನದಲ್ಲಿ ಬಣ್ಣದ ಕಲ್ಲುಗಳ ಬಳಕೆ ನಿಷೇಧಿಸಿದ ಕುವೈಟ್

0
445

ಸನ್ಮಾರ್ಗ ವಾರ್ತೆ

ಕಬರಸ್ತಾನದಲ್ಲಿ ಬಣ್ಣದ ಕಲ್ಲುಗಳನ್ನು ಉಪಯೋಗಿಸುವುದಕ್ಕೆ ಕುವೈತ್ ನಿಷೇಧ ಹೇರಿದೆ. ಇಸ್ಲಾಮಿ ವಿಷಯಕ್ಕೆ ಸಂಬಂಧಿಸಿದ ಸಚಿವಾಲಯವು ಈ ನಿಷೇಧವನ್ನು ಹೇರಿದೆ. ಕಬರಸ್ಥಾನದಲ್ಲಿ ಮೃತ ದೇಹದ ಎರಡೂ ಭಾಗಗಳಲ್ಲಿ ಸಣ್ಣದಾದ, ಬಣ್ಣವಿಲ್ಲದ ಸಾಮಾನ್ಯ ಕಲ್ಲುಗಳನ್ನು ಉಪಯೋಗಿಸಿದರೆ ಸಾಕು ಎಂದು ಸಚಿವಾಲಯ ತಿಳಿಸಿದೆ.

ಮಣ್ಣನ್ನು ಕಚ್ಚಿ ಹಿಡಿಯುದಕ್ಕಾಗಿ ಸಣ್ಣ ಮಟ್ಟದ ಕಲ್ಲುಗಳನ್ನು ಉಪಯೋಗಿಸುವುದರಲ್ಲಿ ತೊಂದರೆ ಇಲ್ಲ. ಆದರೆ ಬಣ್ಣದ ಕಲ್ಲುಗಳನ್ನು ಬಳಸಿ ಸಮಾಧಿಯನ್ನು ಸುಂದರಗೊಳಿಸುವುದು ಶರೀಅತ್ ಗೆ ವಿರುದ್ಧವಾಗಿದೆ ಎಂದು ಫತ್ವ ಶರೀಅತ್ ಸಂಶೋಧನಾ ಇಲಾಖೆಯ ಅಸಿಸ್ಟೆಂಟ್ ಅಧೀನ ಕಾರ್ಯದರ್ಶಿ ತುರ್ಕಿ ಅಲ್ ಮುತಾಯ್ರಿ ಹೇಳಿದ್ದಾರೆ.

ಜನರು ಆಚರಣೆಯ ಗಡಿಗಳನ್ನು ಉಲ್ಲಂಘಿಸುವುದನ್ನು ತಡೆಯುವ ಮತ್ತು ನೂತನವಾದ ಸಂಸ್ಕೃತಿಯನ್ನು ಜಾರಿಗೆ ತರುವುದನ್ನು ವಿರೋಧಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇಸ್ಲಾಮಿ ಶಿಷ್ಟಾಚಾರಕ್ಕೆ ವಿರುದ್ಧವಾದ ರೀತಿಯಲ್ಲಿ ಕಬರ್ ಗಳನ್ನು ನಿರ್ಮಿಸುವುದರ ವಿರುದ್ಧ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.