ಜನವರಿ 1ಕ್ಕಿಂತ ಮೊದಲು ಇಖಾಮ ಅವಧಿ ಮುಗಿದವರಿಗೆ ನವೀಕರಣವಿಲ್ಲ

0
1180

ಸನ್ಮಾರ್ಗ ವಾರ್ತೆ

ಕುವೈಟ್‍ ಸಿಟಿ,ಜು.4: 2020ರ ಜನವರಿ 1ಕ್ಕಿಂತ ಮೊದಲು ಇಖಾಮದ ಕಾಲಾವಧಿ ಮುಗಿದವರಿಗೆ ಇಖಾಮ ನವೀಕರಣವಿಲ್ಲ ಎಂದು ಘೋಷಿಸಲಾಗಿದ್ದು, ಇಖಾಮ ಅವಧಿ ಮುಗಿದವರು ದೇಶವನ್ನು ಬಿಟ್ಟು ಹೋಗಲೇ ಬೇಕಾಗಿದೆ. ನಿಯಮ ಉಲ್ಲಂಘಿಸಿ ಸಿಕ್ಕಿ ಬಿದ್ದರೆ ಗಡೀಪಾರು ಮಾಡಲಾಗುವುದು ಎಂದು ಗೃಹ ಸಚಿವಾಲಯ ಅಧೀನದ ವಸತಿ ಇಲಾಖೆ ತಿಳಿಸಿದೆ.

ಜನವರಿ 2 ರಿಂದ ಫೆಬ್ರವರಿ 29ರವರೆಗೆ ಇಖಾಮ ಕಾಲಾವಧಿ ಮುಗಿದವರಿಗೆ ಆಗಸ್ಟ್ 31ರವರೆಗೆ ದಂಡವಿಲ್ಲದೇ ಇಖಾಮ ನವೀಕರಣ ಮಾಡಿಕೊಳ್ಳಬಹುದಾಗಿದೆ.

ಆರ್ಟಿಕಲ್ 17,20,22,23,24 ವೀಸಾ ವಿಭಾಗದವರಿಗೆ ವಾಸ ಅನುಮತಿ ಒಂದು ವರ್ಷಕ್ಕೆ ಮುಂದೂಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಆದರೆ, ಆರ್ಟಿಕಲ್ 18 ಕಂಪೆನಿ ವೀಸಾ ಇರುವರಿಗೆ ವರ್ಕ್ ಪರ್ಮಿಟ್ ಪ್ರಕಾರ ನವೀಕರಣ ಮಾಡಲಾಗುವುದು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.