ಜಾಮಿಅ ಮಿಲ್ಲಿಯ ವಿವಿ ವಿದ್ಯಾರ್ಥಿಗಳ ಜಾಥಾಕ್ಕೆ ಅನುಮತಿಯಿಲ್ಲ- ನಿಷೇಧಾಜ್ಞೆ

0
396

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 24: ಪೌರತ್ವ ತಿದ್ದುಪಡಿ ಕಾನೂನು ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಜಾಮಿಅ ಮಿಲ್ಲಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ನಡೆಸಲು ಬಯಸಿದ್ದ ಪ್ರತಿಭಟನಾ ಜಾಥಾಕ್ಕೆ ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ದಿಲ್ಲಿ ಮಂಡಿ ಹೌಸ್‍ನಿಂದ ವೇದಿಕೆಯ ಜಂತರ್ ಮಂತರ್ ಗೆ ರಾಲಿ ತೆರಳುವುದಿತ್ತು. ಇದನ್ನು ಪೊಲೀಸರು ತಡೆದಿದ್ದಾರೆ. ಪ್ರತಿಭಟನಾಕಾರರು ಗುಂಪುಗೂಡಿ ನಿಲ್ಲುವುದನ್ನು ತಡೆಯುವುದಕ್ಕೆ ಮಂಡಿ ಹೌಸ್‍ನಲ್ಲಿ ಪೊಲೀಸರು ನಿಷೇಧಾಜ್ಞೆ ಘೋಷಿಸಿದ್ದು ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಸಿದೆ.