ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಯೋಗೀಶ್ ಮಾಸ್ಟರ್ ರ “ನನ್ನ ಅರಿವಿನ ಪ್ರವಾದಿ” ಕೃತಿ ಬಿಡುಗಡೆ

0
495

ಸನ್ಮಾರ್ಗ ವಾರ್ತೆ

ಶ್ರೀ ಯೋಗೀಶ್ ಮಾಸ್ಟರ್ ವಿರಚಿತ “ನನ್ನ ಅರಿವಿನ ಪ್ರವಾದಿ” ಕೃತಿಯನ್ನು ದಿನಾಂಕ 4/11/2023 ರಂದು ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ದುಬೈಯಲ್ಲಿ ಉದ್ಯಮಿಯಾಗಿರುವ ಅನಿವಾಸಿ ಕನ್ನಡಿಗರಾದ ಇಬ್ರಾಹೀಮ್ ಗಡಿಯಾರ್ ಬಿಡುಗಡೆ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದಂತಹ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಶ್ರೀ ಹರೀಶ್ ಕೋಡಿ ಮತ್ತು ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಪ್ರತಿಯನ್ನು ಸ್ವೀಕರಿಸಿ ಶುಭ ಹಾರೈಸಿದರು.

ಇದೊಂದು ಅಪೂರ್ವ ಕೃತಿ, ಖ್ಯಾತ ಸಾಹಿತಿ ಶ್ರೀ ಯೋಗೀಶ್ ಮಾಸ್ಟರ್ ಅವರು ಪ್ರವಾದಿ ಮುಹಮ್ಮದ್ (ಸ ಅ) ರವರ ಬದುಕಿನ ಮತ್ತು ಅವರು ಮಾಡಿದ ಕ್ರಾಂತಿಯ ಸನ್ನಿವೇಶವನ್ನು ಬಹಳ ಮನೋಜ್ಞವಾಗಿ ಓದುಗರ ಮುಂದಿಟ್ಟಿದ್ದಾರೆ.

ಶಾರ್ಜಾ ಎಕ್ಸ್ಪೋ ಸೆಂಟರ್ ನಲ್ಲಿ ನವೆಂಬರ್ 1ರಂದು ಆರಂಭಗೊಂಡ 42 ನೆಯ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಸುಮಾರು 108 ದೇಶಗಳಿಂದ ಪ್ರಕಾಶನ ಸಂಸ್ಥೆಗಳು ಭಾಗವಹಿಸುತ್ತಿದ್ದು ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದ್ದು ಕರ್ನಾಟಕದ ಏಕೈಕ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನವು ಸತತವಾಗಿ ಕಳೆದ ಏಳು ವರ್ಷಗಳಿಂದ ಭಾಗವಹಿಸುತ್ತಿದೆ.