ಇಂದಿನ ಸಮಸ್ಯೆಗಳ ಕುರಿತು ರಾಷ್ಟ್ರಪತಿ ಮಾತನಾಡಲಿ; ಕಟುವಾಗಿ ಟೀಕಿಸಿದ ಶಶಿ ತರೂರ್

0
127

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜೂ. 27: ಪಾರ್ಲಿಮೆಂಟಿನ ಜಂಟಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಕಟುವಾಗಿ ಟೀಕಿಸಿದ್ದಾರೆ.

ಇಂದಿನ ಸಮಸ್ಯೆಗಳಲ್ಲಿ ವಿಷಯಗಳಲ್ಲಿ ರಾಷ್ಟ್ರಪತಿ ಮಾತಾಡಬೇಕಾಗಿದೆ ಎಂದು ಅವರು ಹೇಳಿದರು.
49 ವರ್ಷ ಹಿಂದೆ ನಡೆದ ತುರ್ತು ಪರಿಸ್ಥಿತಿಯ ಕುರಿತು ಹೇಳುವುದರಲ್ಲಿ ಯಾವುದೇ ಅರ್ಥ ಇಲ್ಲ. ನೀಟ್ ಪರೀಕ್ಷೆಯ ಕುರಿತು, ನಿರುದ್ಯೋಗದ ಬಗ್ಗೆ ಅವರಿಂದ ಏನೂ ಕೇಳಿಸಲಿಲ್ಲ ಎಂದು ತರೂರು ಹೇಳಿದರು.

ಮಣಿಪುರ ಎಂಬ ಮಾತೇ ರಾಷ್ಟ್ರಪತಿಯಿಂದಲೋ ಪ್ರಧಾನಿ ನರೇಂದ್ರ ಮೋದಿಯಿಂದಲೋ ಬಂದಿಲ್ಲ. ಭಾರತ ಚೀನ ಗಡಿಯ ಕುರಿತು ಅವರು ಮಾತಾಡಬೇಕಿತ್ತೆಂದು ಶಶಿತರೂರ್ ಭಾಷಣದ ಲೋಪವನ್ನು ಬೆಟ್ಟು ಮಾಡಿದರು.

1975ರ ತುರ್ತುಪರಿಸ್ಥಿತಿಯು ಸಂವಿಧಾನದ ವಿರುದ್ಧ ನೇರ ದಾಳಿ ಮತ್ತು ಕರಾಳ ಅಧ್ಯಾಯ ಎಂದು ರಾಷ್ಟ್ರಪತಿ ಪಾರ್ಲಿಮೆಂಟಿನ ಜಂಟಿ ಸಮ್ಮೇಳನದಲ್ಲಿ ಹೇಳಿದರು. ತುರ್ತು ಪರಿಸ್ಥಿಯ ಕಾಲದಲ್ಲಿ ದೇಶ ಆರಾಜಕತ್ವಕ್ಕೆ ದೂಡಲ್ಪಟ್ಟಿತ್ತು. ಆದರೆ ಸಂವಿಧಾನ ವಿರೋಧಿಯಾದ ಇಂತಹ ಶಕ್ತಿಗಳ ವಿರುದ್ಧ ದೇಶ ಗೆದ್ದಿದೆ ಎಂದು ರಾಷ್ಟ್ರಪತಿ ಹೇಳಿದರು.