ದೇಶದಲ್ಲಿ 2.45 ಲಕ್ಷ ಹೊಸ ಕೊರೋನ ಸೋಂಕಿತರು: ದೆಹಲಿಯಲ್ಲಿ ಪ್ರತಿ 100 ಪರೀಕ್ಷೆಗಳಿಗೆ 26 ಪಾಸಿಟಿವ್!

0
421

ಸನ್ಮಾರ್ಗ ವಾರ್ತೆ

ನವದೆದಲಿ: ಬುಧವಾರ 2,45,525 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ, 84,479 ಜನರು ಗುಣಮುಖರಾಗಿದ್ದು 379 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 1,61,721 ಹೆಚ್ಚಳವಾಗಿದೆ. ಪ್ರಸ್ತುತ ದೇಶದಲ್ಲಿ 11.10 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕೊರೋನ ಮೂರನೆ ಅಲೆಯಲ್ಲು ಸಕ್ರಿಯ ಪ್ರಕರಣಗಳು ಮೊದಲ ಬಾರಿಗೆ 11 ಲಕ್ಷವನ್ನು ದಾಟಿವೆ‌.

ಅದೇ ಸಮಯದಲ್ಲಿ, ಹೊಸದಾಗಿ ಸೋಂಕಿತರಲ್ಲಿ 52 ಸಾವಿರ ಹೆಚ್ಚಳ ಕಂಡುಬಂದಿದ್ದು, ಮಂಗಳವಾರ 1.93 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದರು. ಇಲ್ಲಿಯವರೆಗೆ, ದೇಶದಲ್ಲಿ ಒಟ್ಟು 3.63 ಕೋಟಿ ಜನರು ಸೋಂಕಿನ ಹಿಡಿತಕ್ಕೆ ಒಳಗಾಗಿದ್ದಾರೆ, ಅವರಲ್ಲಿ 3.47 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ಹಾಗೂ 4,85,036 ಜನರು ಸಾವನ್ನಪ್ಪಿದ್ದಾರೆ.

ಏತನ್ಮಧ್ಯೆ, ದೆಹಲಿಯಲ್ಲಿ ಪಾಸಿಟಿವಿಟಿ ದರವು 26.22% ಕ್ಕೆ ಏರಿದೆ. ಇದು ಕಳೆದ 7 ತಿಂಗಳಲ್ಲಿ ಅತಿ ಹೆಚ್ಚು. ಹಿಂದಿನ ಮೇ 5 ರಂದು, ರಾಜಧಾನಿಯಲ್ಲಿ ಧನಾತ್ಮಕ ದರವು 25% ನಲ್ಲಿ ದಾಖಲಾಗಿತ್ತು. ಪ್ರಸ್ತುತ ದೆಹಲಿಯಲ್ಲಿ 100 ಕೊರೋನ ಪರೀಕ್ಷೆಗಳಲ್ಲಿ 26 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ.