ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಎ.19: ಕೊರೊನಾ ವೈರಸ್ ಹಾವಳಿಯ ನಂತರ ಅಮೆರಿಕದಲ್ಲಿ ಘೋಷಿಸಲಾಗಿರುವ ಲಾಕ್ಡೌನ್ ವಿರುದ್ಧ ಜನರು ಪ್ರತಿಭಟನೆಗಿಳಿದಿದ್ದಾರೆ. ನಿಯಂತ್ರಣಗಳಲ್ಲಿ ಸಡಿಲಿಕೆಗೆ ಟ್ರಂಪ್ ಮುಂದಾಗಿದ್ದಾರೆ ಎಂಬ ಸುದ್ದಿಯ ಮಧ್ಯೆ ಜನರು ಕೂಡ ಲಾಕ್ಡೌನ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೊನಾ ಪ್ರಕರಣ ಕಡಿಮೆ ಇರುವಲ್ಲಿ ಈ ಪ್ರತಿಭಟನೆ ಕಾಣಿಸಿಕೊಳ್ಳುತ್ತಿದ್ದು ನ್ಯೂ ಹಂಸ್ಫಿಯರ್ ನಲ್ಲಿ ಪ್ರತಿಭಟನೆಯಲ್ಲಿ 400 ಮಂದಿ ಭಾಗವಹಿಸಿದ್ದರು. ಮೆರೆಲೆಂಡ್ನಲ್ಲಿ ಇಂತಹದೇ ಒಂದು ರ್ಯಾಲಿ ನಡೆದಿದೆ. ಇದರಲ್ಲಿ 250 ಮಂದಿ ಭಾಗವಹಿಸಿದ್ದರು.
ಡೆಮಕ್ರಾಟಿಕ್ ಪಾರ್ಟಿಯ ಸರಕಾರ ಇರುವ ರಾಜ್ಯಗಳಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿವೆ. ಆದರೆ ಪ್ರತಿಭಟನೆ ನಡೆದಿರುವ ನ್ಯೂ ಹಂಸಫಿಯರ್ ನಲ್ಲಿ ರಿಪಬ್ಲಿಕನ್ ಪಾರ್ಟಿ ಸರಕಾರ ಇದೆ.
ಅಮೆರಿಕದಲ್ಲಿ ಘೋಷಿಸಲಾಗಿರುವ ಸ್ಟೇ ಅಟ್ ಹೋಂ ಆದೇಶ ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಮೆರಿಕದಲ್ಲಿ ಮೇ. 4ರವರೆಗೆ ಸ್ಟೇ ಅಟ್ ಹೋಂ ಆರ್ಡರ್ ಜಾರಿಯಲ್ಲಿರುತ್ತದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












