ಪ್ರೇಮ ವಿವಾಹ: ಮಗಳನ್ನು ಕೊಂದು ಸುಟ್ಟು ಹಾಕಿದ ತಂದೆ ತಾಯಿ

0
392

ಸನ್ಮಾರ್ಗ ವಾರ್ತೆ

ಜೈಪುರ, ಜು.5: ಪ್ರೇಮ ವಿವಾಹವಾಗಿರುವ ತಮ್ಮ ಮಗಳನ್ನು ತಂದೆ ತಾಯಿ ಕೊಂದು ಸುಟ್ಟು ಹಾಕಿದ ಘಟನೆ ರಾಜಸ್ತಾನದ ಝಾಲವಾರದಲ್ಲಿ ನಡೆದಿದೆ.

ಪತಿಯ ಮುಂದೆ ತಂದೆ ತಾಯಿ ಯುವತಿಯನ್ನು ಬಲವಂತದಿಂದ ಹಿಡಿದು ಕೊಂಡು ಹೋಗಿದ್ದಾರೆ ಮತ್ತು ಕೊಲೆ ಮಾಡಿ ಬೆಂಕಿ ಹಂಚಿದ್ದಾರೆ. ರಾಜಸ್ತಾನ ಒಂದಿಲ್ಲ ಒಂದು ಕಾರಣಕ್ಕೆ ಈ ರೀತಿ ಇತ್ತೀಚೆಗೆ ಕುಖ್ಯಾತಿ ಗಳಿಸುತ್ತಿದೆ.

ಕುಟುಂಬದ ಇಷ್ಟಕ್ಕೆ ವಿರುದ್ಧವಾಗಿ ಹುಡುಗಿ ರವಿ ಭಿಲ್ ಎಂಬ ಯುವಕನ್ನು ಮದುವೆಯಾಗಿದ್ದು, ತಂದೆ ತಾಯಿಯ ಸೇಡಿಗೆ ಕಾರಣವಾಗಿತ್ತು. ಯುವತಿ ಮತ್ತು ಯುವಕ ಮದುವೆ ಮಾಡಿಕೊಂಡ ಮೇಲೆ ತಮ್ಮ ಕುಟುಂಬದಿಂದ ಪಾರಾಗಲು ವಿವಿಧ ಕಡೆಗಳಲ್ಲಿ ವಾಸಿಸಿದ್ದಾರೆ.

ಮಧ್ಯಪ್ರದೇಶದ ಒಂದು ಗ್ರಾಮದ ಬ್ಯಾಂಕಿಗೆ ಇಬ್ಬರು ಬರುವುದು ಕುಟುಂಬಕ್ಕೆ ತಿಳಿದು. ಇವರನ್ನ ಅಲ್ಲಿಗೆ ಬಂದ ತಂದೆ ತಾಯಿ ಬಲವಂತವಾಗಿ ಹುಡುಗಿಯನ್ನು ಎಳೆದು ಕೊಂಡು ಬಂದು ಕೊಲೆ ಮಾಡಿದ್ದಾರೆ. ನಂತರ ಅವಳನ್ನು ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ.

ಈ ಜಗತ್ತಿನಲ್ಲಿ ಇಂತಹ ನಿರ್ಧಯಿ ತಂದೆ ತಾಯಿಗಳು ಇದ್ದಾರೆ. ಹುಡುಗಿಯ ಪತಿ ಘಟನೆಯ ಸ್ಥಳಕ್ಕೆ ಪೊಲೀಸರೊಂದಿಗೆ ತಲುಪುವಷ್ಟರಲ್ಲಿ ಹುಡುಗಿಯ ದೇಹದ ಬಹುಭಾಗ ಸುಟ್ಟು ಹೋಗಿತ್ತು. ದೇಹದ ಅವಶೇಷಗಳನ್ನು ಪರಿಶೀಲನೆಗೆ ಫಾರೆನ್ಸಿಕ್ ಲ್ಯಾಬ್‍ಗೆ ಕಳುಹಿಸಲಾಗಿದೆ. ಘಟನೆಯಲ್ಲಿ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು.