ಮಹಾರಾಷ್ಟ್ರ: ಮೇ. 31ರವರೆಗೆ ಲಾಕ್‍ಡೌನ್

0
433

ಸನ್ಮಾರ್ಗ ವಾರ್ತೆ

ಮುಂಬೈ,ಮೇ.15: ಮಹಾರಾಷ್ಟ್ರದ ಹಾಟ್‍ಸ್ಪಾಟ್‍ಗಳಲ್ಲಿ ಲಾಕ್‍ಡೌನ್ ಮೇ 31ರವರೆಗೆ ಮುಂದುವರೆಸಲು ರಾಜ್ಯ ಸರಕಾರ ನಿರ್ಧರಿಸಿದ್ದು ಮುಂಬೈ, ಪುಣೆ, ಮಾಲೆಗಾಂವ್, ಔರಂಗಾಬಾದ್‍ಗಳಲ್ಲಿ ಮೇ. 31ರವರೆಗೆ ಲಾಕ್‌ಡೌನ್ ಇರಲಿದೆ.

ಮೇ 17ಕ್ಕೆ ಲಾಕ್‍ ಡೌನ್ ಕೊನೆಗೊಳ್ಳುವ ಕುರಿತು ಕೇಂದ್ರ ಸರಕಾರದ ನಿರ್ಧಾರ ಪ್ರಕಟವಾಗುವ ಮೊದಲೇ ಮಹಾರಾಷ್ಟ್ರ ಸರಕಾರ ತನ್ನ ತೀರ್ಮಾನವನ್ನು ಜಾರಿಗೆ ತಂದಿತ್ತು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಸಚಿವರು ಭಾಗವಹಿಸಿದ್ದ ಸಭೆಯಲ್ಲಿ ಲಾಕ್‍ಡೌನ್ ಮುಂದುವರಿಸುವ ತೀರ್ಮಾನಕ್ಕೆ ಬರಲಾಗಿತ್ತು. ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಸಭೆಯಲ್ಲಿದ್ದರು.

ಮಹಾರಾಷ್ಟ್ರದಲ್ಲಿ 975 ಜನರು ಕೊರೋನಾ ಬಾಧೆಯಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 26000ಕ್ಕೆ ತಲುಪಿದೆ. ಭಾರತದಲ್ಲಿ ಕೊರೋನಾ ಬಾಧೆ ಹೆಚ್ಚು ಇರುವ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಕೂಡ ಒಂದು.