ಮಕ್ಕಾ: ಮೃತಪಟ್ಟ 1301 ಹಜ್ ಯಾತ್ರಿಗಳಲ್ಲಿ ಶೇ.83 ಮಂದಿಗೆ ಅಧಿಕೃತ ಅನುಮತಿಯಿರಲಿಲ್ಲ; ಸೌದಿ ಆರೋಗ್ಯ ಸಚಿವ

0
365

ಸನ್ಮಾರ್ಗ ವಾರ್ತೆ

ಈ ಬಾರಿಯ ಹಜ್ ನಿರ್ವಹಣೆಯ ವೇಳೆ ಒಟ್ಟು 1301ಮಂದಿ ಮೃತ ಪಟ್ಟಿದ್ದಾರೆ ಎಂದು ಸೌದಿ ಆರೋಗ್ಯ ಸಚಿವಾಲಯ ತಿಳಿಸಿದೆ.

ಇವರಲ್ಲಿ ಹೆಚ್ಚಿನವರು ಅನಧಿಕೃತವಾಗಿ ಹಜ್ ನಿರ್ವಹಿಸಲು ಬಂದವರಾಗಿದ್ದಾರೆ ಎಂದು ಕೂಡ ಸಚಿವಾಲಯ ತಿಳಿಸಿದೆ. ಮೃತಪಟ್ಟವರಲ್ಲಿ 83% ಮಂದಿ ಕೂಡ ಅನುಮತಿ ಇಲ್ಲದೆ ಹಜ್ ನಿರ್ವಹಣೆಗೆ ಬಂದವರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಹೀಗೆ ಅನಧಿಕೃತವಾಗಿ ಹಜ್ ನಿರ್ವಹಣೆಗೆ ಬಂದವರಿಗೆ ತಂಗಲು ಸೂಕ್ತ ವ್ಯವಸ್ಥೆಯಾಗಲಿ ವಾಹನ ಸೌಲಭ್ಯಗಳಾಗಲಿ ಇರಲಿಲ್ಲ. ಇವರು ಕಟು ತಾಪಮಾನವನ್ನು ಎದುರಿಸಬೇಕಾಯಿತು. ವಾಹನ ಸೌಲಭ್ಯ ಇಲ್ಲದ ಕಾರಣ ಅವರು ದೀರ್ಘ ದೂರ ನಡೆದುದರಿಂದ ಬಳಲಿಕೆ ಉಂಟಾಗಿದೆ. ಈ ನೆಲೆಯಲ್ಲಿ ಅವರು ದೈಹಿಕವಾಗಿ ಬಳಲಿ ಮೃತಪಟ್ಟಿರುವ ಸಾಧ್ಯತೆ ಇದೆ. ಹೀಗೆ ಮೃತ ಪಟ್ಟವರಲ್ಲಿ ಹೆಚ್ಚಿನವರು ವೃದ್ಧರು ಮತ್ತು ಶಾಶ್ವತ ರೋಗಿಗಳೇ ಹೆಚ್ಚಿದ್ದಾರೆ ಎಂದು ಸೌದಿ ಆರೋಗ್ಯ ಸಚಿವ ಫಹದ್ ಅಲ್ ಜಲಾಜೀಲ್ ಹೇಳಿದ್ದಾರೆ.