ಮಲ್ಪೆ: ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ – ಸೀರತ್ ಸ್ನೇಹ ಸಮ್ಮಿಲನ

0
252

ಸನ್ಮಾರ್ಗ ವಾರ್ತೆ

ಮಲ್ಪೆ: ಜಮಾಅತೆ ಇಸ್ಲಾಮಿ ಹಿಂದ್, ಮಲ್ಪೆ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ಸೀರತ್ ಅಭಿಯಾನದ ಪ್ರಯುಕ್ತ ಸೈಂಟ್ ಅನ್ನಮ್ಮ ಚರ್ಚ್ ತೊಟ್ಟಂ ಸಭಾಂಗಣದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷರಾಗಿರುವ ರಮೇಶ್ ತಿಂಗಳಾಯ ಅವರು ಎಲ್ಲಾ ಧರ್ಮದ ಮೂಲ ಸಂದೇಶ ಪ್ರೀತಿ ವಿಶ್ವಾಸ ಆಗಿದೆ. ಬಾಲ್ಯ ಕಾಲದಲ್ಲಿದ್ದ ಪರಸ್ಪರಲ್ಲಿದ್ದ ಸೌಹಾರ್ದ ವಾತಾವರಣ ಇಂದು ಇಲ್ಲವಾಗಿದೆ. ಅದನ್ನು ಮರಳಿ ತರಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಅದೇ ರೀತಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಮಾತನಾಡಿದ ಸೈಂಟ್ ಅನ್ನಮ್ಮ ಚರ್ಚ್ ಇದರ ಧರ್ಮ ಗುರು ಆಗಿರುವ ಡೆನಿಸ್ ಡೇಸ ಮಾತನಾಡುತ್ತಾ ಎಲ್ಲಾ ಧರ್ಮದ ಧರ್ಮ ಗ್ರಂಥವನ್ನು ಓದಿದಾಗ ಧರ್ಮದ ನಿಜ ಸಂದೇಶ ತಿಳಿಯುತ್ತದೆ ಎಂದರು. ಹಾಗೂ ಪ್ರವಾದಿ ಮುಹಮ್ಮದ್ ರು(ಸ) ಸಾರಿದ ಸಂದೇಶದಲ್ಲಿ ಪ್ರಮುಖವಾಗಿ ಕ್ಷಮೆ ಮತ್ತು ದಯೆ, ನ್ಯಾಯ ನೀತಿ ಸಮಾನತೆ, ಸಮುದಾಯ ಮತ್ತು ಭಾತೃತ್ವ ,ನಿರ್ಮಲ ನಿಷ್ಕಳಂಕ ವ್ಯಕ್ತಿತ್ವ ,ಶಾಂತಿ ಸೌಹಾರ್ದ ಮತ್ತು ಜ್ಞಾನ ಸಂಪಾದನೆ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ಅಧ್ಯಕ್ಷ ಇಸ್ಹಾಕ್ ಪುತ್ತೂರು ರವರು ಮಾತನಾಡುತ್ತಾ ಮನುಷ್ಯನು ತನ್ನ ನಿಜವಾದ ಸೃಷ್ಟಿಕರ್ತನನ್ನು ಅರಿಯಲು ದೇವನು ಪ್ರವಾದಿಯವರನ್ನು ಕಳುಹಿಸುತ್ತಾನೆ. ಯಾವ ಧರ್ಮವು ಸುಳ್ಳು ಹೇಳಲು ಕಲಿಸುವುದಿಲ್ಲ, ಸತ್ಯ ಹೇಳಿದಾಗ ಇಲ್ಲಿ ಕೋಮುವಾದ ಉಂಟಾಗಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸರ್ವಧರ್ಮ ಸಮನ್ವಯ ಸಮಿತಿ ಇದರ ಕಾರ್ಯದರ್ಶಿಯಾಗಿರುವ ಲೆಸ್ಲಿ ಆರೋಝ, ಸಿ ಎಸ್ ಐ ಚರ್ಚ್ ಧರ್ಮ ಗುರು ಎಡ್ವಿನ್ ಜೋಸೆಫ್, ಅಂಬೇಡ್ಕರ್ ಯುವ ಸೇನೆ ಇದರ ಅಧ್ಯಕ್ಷರಾಗಿರುವ ಗಣೇಶ್ ನೆರ್ಗೀ ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಮತ್ತು ಸ್ವಾಗತ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ನೆರವೇರಿಸಿದರು. ಜಿ ಶುಐಬ್ ಮಲ್ಪೆ ನಿರೂಪಿಸಿ, ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಅಧ್ಯಕ್ಷರು ಬಿ ಸಿರಾಜ್ ಅಹಮದ್ ಧನ್ಯವಾದವಿತ್ತರು.