ಸನ್ಮಾರ್ಗ ವಾರ್ತೆ
ಕೊಲ್ಕತಾ: ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ನಡುವೆ ಭಿನ್ನಮತ ತೀವ್ರಗೊಂಡ ಹಿನ್ನೆಲೆಯಲ್ಲಿ ಶನಿವಾರ ಪಾರ್ಟಿಯ ಉನ್ನತ ನಾಯಕರ ಸಭೆಯನ್ನು ಮಮತಾ ಬ್ಯಾನರ್ಜಿ ಕರೆದಿದ್ದಾರೆ. ಪಾರ್ಟಿಯ (ಒನ್ ಮ್ಯಾನ್ ಒನ್ ಪೋಸ್ಟ್) ಒಬ್ಬನಿಗೆ ಒಂದೇ ಹುದ್ದೆ ನೀತಿಯನ್ನು ಪ್ರೋತ್ಸಾಹಿಸಲು ಅಭಿಷೇಕ್ ಬ್ಯಾನರ್ಜಿ ಮುಂದಾಗಿದ್ದಾರೆ. ಆದರೆ, ಅವರ ಈ ಪ್ರಯತ್ನಕ್ಕೆ ಹಿರಿಯ ನಾಯಕರೇ ವಿರೋಧ ಇದ್ದಾರೆ ಎನ್ನಲಾಗಿದೆ. ಕೆಲವರು ಎರಡೆರಡು ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಅಭಿಷೇಕ್ ಮತ್ತು ಇವರ ನಡುವೆ ಸಮಸ್ಯೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿದೆ.
ತೃಣಮೂಲ ಸೇರಿ ಕೆಲಸ ಮಾಡುತ್ತಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ರೊಂದಿಗೆ ನಾಯಕರ ಭಿನ್ನಮತ ಬಹಿರಂಗವಾಗುತ್ತಿದೆ. ತನ್ನ ಸಾಮಾಜಿಕ ಮಾಧ್ಯಮ ಖಾತೆ ಪ್ರಶಾಂತ್ ಕಿಶೋರ್ ಮತ್ತು ತಂಡ ದುರುಪಯೋಗಿಸುತ್ತಿದೆ ಎಂದು ಶುಕ್ರವಾರ ತೃಣಮೂಲ ನಾಯಕ ಚಂದ್ರಿಭಟ್ಟಾಚಾರ್ಯ ಆರೋಪಿಸಿದ್ದರು. ಇದು ಎರಡು ವಿಭಾಗದ ನಡುವೆ ವಿವಾದಕ್ಕೆ ಕಾರಣವಾಗಿದೆ. ಚುನಾವಣೆಗೆ ಮೊದಲು ಪ್ರಶಾಂತ್ ಕಿಶೋರ್ ತಂಡ ಐಪಿಐಸಿ ಎಂಬ ಹೆಸರಿನಲ್ಲಿ ನನ್ನ ಒಂದು ಟ್ವಿಟರ್ ಅಕೌಂಟ್ ಸೃಷ್ಟಿಸಿತು. ಇದರಲ್ಲಿ ಇಂದು ಒಬ್ಬನಿಗೆ ಒಂದು ಸ್ಥಾನ ಎಂಬ ಪೋಸ್ಟ್ ಹಾಕಿದ್ದಾರೆ. ನಾನು ಇದನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.












