ಪರಿಸ್ಥಿತಿ ಗಂಭೀರ, ಒಗ್ಗಟ್ಟು ಪ್ರದರ್ಶಿಸಬೇಕು- ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಮಮತಾ ಬ್ಯಾನರ್ಜಿ ಪತ್ರ

0
969

ಸನ್ಮಾರ್ಗ ವಾರ್ತೆ-

ಕೊಲ್ಕತಾ, ಡಿ. 24: ದೇಶದ ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕೆಂದು ದೇಶದ ಬಿಜೆಪಿಯೇತರ ಮುಖ್ಯಮಂತ್ರಿಗಳೀಗೆ ಮತ್ತು ಹಿರಿಯ ರಾಜಕೀಯ ನಾಯಕರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರದ ಅಧೀನದಲ್ಲಿ ದೇಶದ ಪ್ರಜಾಪ್ರಭುತ್ವ ಬೆದರಿಕೆ ಎದುರಿಸುತ್ತಿದೆ. ಆದ್ದರಿಂದ ಒಗ್ಗೂಡಿ ಇದನ್ನು ಪ್ರತಿರೋಧಿಸಬೇಕಾಗಿದೆ ಎಂದರು.

ಎನ್ ಆರ್ ಸಿ ಮತ್ತು ಪೌರತ್ವ ತಿದ್ದುಪಡಿ ಕಾನೂನಿನ ಹಿನ್ನೆಲೆಯಲ್ಲಿ ದೇಶದ ಮಹಿಳೆಯರು, ಮಕ್ಕಳು, ರೈತರು ಕಾರ್ಮಿಕರು, ಪರಿಶಿಷ್ಟ ವರ್ಗ, ಪಂಗಡ ಮತ್ತು ಇತರ ಅಲ್ಪಸಂಖ್ಯಾತರ ಸಹಿತ ಜಾತಿಧರ್ಮ ವ್ಯತ್ಯಾಸವಿಲ್ಲದೆ ದೇಶದ ಪ್ರಜೆಗಳು ಭೀತಿಯಲ್ಲಿದ್ದಾರೆ. ಈ ಪರಿಸ್ಥಿತಿ ತೀರ ಗಂಭೀರವಾಗಿದ್ದು ಹಿಂದೆಂದಿಗಿಂತ ನಾವು ಈಗ ಒಗ್ಗಟ್ಟಿನಲ್ಲಿರಬೇಕಾದ ಸಮಯ ಇದು ಎಂದು ತೀರ ನೊಂದುಕೊಂಡು ಮಮತಾ ಬ್ಯಾನರ್ಜಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಕಾ೦ಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಶರದ್ ಪವಾರ್, ವೈಎಸ್‍ ಆರ್ ಕಾಂಗ್ರೆಸ್ ನಾಯಕ ಜಗನ್ ರೆಡ್ಡಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಿತ ಪ್ರತಿಪಕ್ಷದ ಎಲ್ಲ ಮುಖ್ಯಮಂತ್ರಿಗಳಿಗೆ ಮಮತಾ ಪತ್ರ ಬರೆದಿದ್ದಾರೆ.