ಮಂಗಳೂರು: ‘ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್’ ಪರೀಕ್ಷಾ ಫಲಿತಾಂಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0
362

ಸನ್ಮಾರ್ಗ ವಾರ್ತೆ

ಮಂಗಳೂರು: “ಭಾಷೆಯು ಜ್ಞಾನ ಗಳಿಸಲಿಕ್ಕಿರುವ ಒಂದು ಮಾಧ್ಯಮ ಮಾತ್ರವಾಗಿದೆ. ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್ ಹೀಗೆ ಹಲವು ತರದ ವಿದ್ಯೆಯು ಲೌಕಿಕ ವಿದ್ಯೆಯಾಗಿದೆ. ಅದೇ ವೇಳೆ ಆದ್ಯಾತ್ಮಿಕ ವಿದ್ಯೆಯು ನಮಗೆ ಜೀವನದ ಉದ್ದೇಶವನ್ನು ಕಲಿಸಿ ಕೊಡುತ್ತದೆ” ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸ್ಥಾನೀಯ ಪ್ರಭಾರ ಅಧ್ಯಕ್ಷರಾದ ಕೆ. ಅಬ್ದುರ್ರಹ್ಮಾನ್ ಹೇಳಿದರು.

ಇಲ್ಲಿನ ಹಿದಾಯತ್ ಸೆಂಟರ್‌ನಲ್ಲಿ ಜೂನ್ 29ರಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಆಯೋಜಿಸಲಾದ ಸರ್ಟಿಫಿಕೇಟ್ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮುಂದುವರಿದು ಅವರು, “ಜನರಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೋರ್ಡ್, ಇಸ್ಲಾಮೀ ಪರೀಕ್ಷೆಯನ್ನು ಆಯೋಜಿಸಿ, ಜನರಲ್ಲಿ ಆ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಇಸ್ಲಾಮೀ ಕೋರ್ಸ್ ಪರೀಕ್ಷೆಯು ಇಸ್ಲಾಮಿನ ಮೂಲಭೂತ ಜ್ಞಾನ ಗಳಿಸಲು ಪರ್ಯಾಪ್ತವಾಗಿದೆ. ಇದರಲ್ಲಿ ಕಲಿತ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಬೇಕು ಮತ್ತು ಇದರ ಸಂಪೂರ್ಣ ಪ್ರಯೋಜನ ಪಡೆಯಲು ಪ್ರಯತ್ನಿಸಬೇಕು” ಎಂದು ಹೇಳಿದರು.

ಕಳೆದ ಅವಧಿಯಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ rank ಪಡೆದ ನೂರ್‌ ಜಹಾನ್ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನೂ ಸನ್ಮಾನಿಸಲಾಯಿತು.

ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಬೋರ್ಡ್‌ನ ಮಂಗಳೂರು ಸೆಂಟರ್ ಸಂಚಾಲಕರಾದ ಹನೀಫ್ ಮಾಸ್ಟರ್‌ರವರು ಕೊನೆಯಲ್ಲಿ ಧನ್ಯವಾದವಿತ್ತರು. ಇಂಜಿನಿಯರ್ ಮೀರ್ ಇಬ್ರಾಹೀಮ್ ಖಲೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.