ಸನ್ಮಾರ್ಗ ವಾರ್ತೆ
ಲಕ್ನೊ, ಮೇ. 20: ಮದುವೆಯ ಆಶೆಯಲ್ಲಿ ಊರಿನಿಂದ ಒಂದು ವಾರ 850 ಕಿಲೋಮೀಟರ್ ಸೈಕಲ್ ತುಳಿದು ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಕೊರೊಂಟೈನ್ ಕೇಂದ್ರದ ಪಾಲಾದ ಮದುಮಗನ ಅವಸ್ಥೆಯಂತೂ ಹೇಳಿ ಪ್ರಯೋಜನವಿಲ್ಲ. ಸೋನುಕುಮಾರ್ ಚೌಹಾನ್ (24) ಪಂಜಾಬ್ನ ಲುಧಿಯಾನದಿಂದ ಉತ್ತರ ಪ್ರದೇಶ ನೇಪಾಳದ ಗಡಿ ಪ್ರದೇಶದ ಗ್ರಾಮಕ್ಕೆ ಸೈಕಲಲ್ಲಿ ಮದುವೆಯಾಗುವ ಕನಸಿನಲ್ಲಿ ಹೊರಟು ಬಂದಿದ್ದ.
ಜತೆಗೆ ಮೂವರು ಗೆಳೆಯರೂ ಇದ್ದರು. ರಾತ್ರೆ ಹಗಲು ಸೈಕಲಿನಲ್ಲಿ ಸಂಚರಿಸಿ ಕೊನೆಗೂ ಉದ್ದೇಶಿತ ಸ್ಥಳಕ್ಕೆ ತಲುಪಲು 150 ಕಿ.ಮೀ. ಉಳಿದಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮದುವೆ ತೀರ್ಮಾನಿಸಿದ ಸ್ಥಳಕ್ಕೆ ತಲುಪಲಾಗದೆ ಬಲರಾಮಪುರ ಜಿಲ್ಲೆಯ ಗಡಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು. ಕೂಡಲೇ ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಯಿತು.
ಮಹಾರಾಜ ಗಂಜ್ ಜಿಲ್ಲೆಯ ವಿಪ್ರ ರಸಲ್ಪುರದ ಸೋನುಕುಮಾರ್ ಲುಧಿಯಾನದ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಮದುವೆ ಮೊದಲೇ ನಿಶ್ಚಯಿಸಲಾಗಿತ್ತು. ಲಾಕ್ ಡೌನ್ನಿಂದಾಗಿ ಮದುವೆ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಮದುವೆಯಾಗಲೇ ಬೇಕೆಂಬ ಆಶೆಯಲ್ಲಿ ಗೆಳೆಯರ ಜೊತೆಗೂಡಿ ಸೈಕಲ್ ತುಳಿದಿದ್ದಾನೆ. ಒಂದು ವೇಳೆ ನಿಗದಿತ ಸ್ಥಳಕ್ಕೆ ತಲುಪಿದ್ದರೆ ಇಷ್ಟರಲ್ಲಿ ಮದುವೆಯಾಗುತ್ತಿತ್ತು. ಎಷ್ಟೇ ವಿನಂತಿಸಿದರೂ ಅಧಿಕಾರಿಗಳು ಮುಂದೆ ಹೋಗಲು ಬಿಡಲಿಲ್ಲ ಎಂದು ಯುವಕ ಸುದ್ದಿ ಸಂಸ್ಥೆಯೊಂದಿಗೆ ದುಃಖ ತೋಡಿಕೊಂಡಿದ್ದಾನೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












