ಮಾರುತಿ ಬಲೆನೊ ಆರ್‌ಎಸ್‍ ಕಾರ್ ಮೇಲೆ 1ಲಕ್ಷ ರೂ. ದರ ಕಡಿತ ಮಾಡಿದ ಕಂಪೆನಿ!

0
638

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: ಮಾರುತಿಯ ಪ್ರೀಮಿಯಂ ಹಾಚ್‍ಬ್ಯಾಕ್ ಬಲೆನೊ ಆರ್‌ಎಸ್‍ಗೆ ಒಂದು ಲಕ್ಷ ರೂಪಾಯಿ ದರ ಕಡಿತ ಮಾಡಲಾಗಿದೆ. ವಿವಿಧ ಮಾಡೆಲ್‍ಗಳ ಮೇಲೆ 5,000 ರೂಪಾಯಿ ದರ ಕಡಿತ ಮಾಡಿದ ಬೆನ್ನಿಗೆ ಆರ್‌ಎಸ್‌ಗೆ ಮಾರುತಿ ಸುಝುಕಿ ಕಂಪೆನಿ ಭಾರೀ ದರ ಕಡಿತ ಡಿಸ್ಕೌಂಟ್ ನೀಡಿದೆ. ಬಲೆನೊ ಕಾರ್‌ಗೆ ಒಂದು ಲಕ್ಷ ರೂಪಾಯಿ ಕಡಿಮೆ ಮಾಡಲಾಗಿದ್ದು 1.0 ಲೀಟರ್ ಬ್ಯುಸ್ಟರ್‍ಜೆಟ್ ತ್ರಿ ಸಿಲಿಂಡರ್ ಟರ್‍ಬೊಚಾರ್ಜ್‍ಡ್ ಪೆಟ್ರೋಲ್ ಇಂಜಿನ್ ಬಲೆನೊ ಆರ್‌ಎಸ್ ಹೊಂದಿದೆ. 100 ಎಚ್‍ಪಿ ಶಕ್ತಿ 150 ಎನ್‍ಎಂ ಟಾರ್ಕ್ ಇಂಜಿನ್ ನೀಡಲಾಗುವುದು. ಟ್ರಾನ್ಸ್‌ಮಿಷನ್‍ಗೆ ಐದು ಸ್ಪೀಡ್ ಮ್ಯಾನ್ಯುವೆಲ್ ಇದೆ. 1.2 ಲೀಟರ್ ಪೆಟ್ರೋಲ್ ಇಂಜಿನ್. 1.3 ಲೀಟರ್ ಡೀಸೆಲ್ ಇಂಜಿನ್ ಬಲೆನೊ ಮಾರುಕಟ್ಟೆಗೆ ಬರಲಿದೆ.