ಮಸೀದಿಗಳನ್ನು ತೆರೆಯುವಾಗ ಇದು ಗಮನದಲ್ಲಿರಲಿ …

0
8326

ಸನ್ಮಾರ್ಗ ವಾರ್ತೆ

ಲೇಖಕರು: ಇಲ್ಯಾಸ್ ಮೌಲವಿ

ಒಂದು ಪ್ರಾಣವನ್ನು ರಕ್ಷಿಸುವುದು ಇಸ್ಲಾಮೀ ಶರೀಅತ್‍ನ ಮೂಲಭೂತ ಕರ್ತವ್ಯವಾಗಿದೆ‌. ಅನ್ಯಾಯವಾಗಿ ಒಂದು ಜೀವವನ್ನು ಕೊಲ್ಲುವುದನ್ನು ಸಕಲ ಮನುಷ್ಯರನ್ನು ಕೊಲ್ಲುವುದಕ್ಕೆ ಸಮಾನ ಎಂದು ಕುರ್‌ಆನ್‍ನಲ್ಲಿ ಅಲ್ಲಾಹನು ಸ್ಪಷ್ಟಪಡಿಸಿದ್ದಾನೆ. ಪ್ರತ್ಯಕ್ಷವಾದ ಕೊಲೆ ಪರೋಕ್ಷವಾದ ಕೊಲೆ ಹಠಾತ್ತನೆ ನಡೆಸುವ ಕೊಲೆ ಮತ್ತು ಚಿತ್ರ ಹಿಂಸೆ ನೀಡಿ ನಡೆಸುವ ಕೊಲೆ ಎಲ್ಲವೂ ಈ ಸಾಲಿಗೆ ಸೇರಿದೆ. ಸಾವಿಗೆ ಕಾರಣವಾಗುವ ಮತ್ತು ಅದರತ್ತ ಸಾಗಲು ಪ್ರೇರೇಪಿಸುವ ಕಾರ್ಯ ಮಾಡುವವರು ಮತ್ತು ಅದಕ್ಕೆ ಕಾರಣಕರ್ತರಾದ ಎಲ್ಲರೂ ಅಪರಾಧಿಗಳು ಮತ್ತು ಶಿಕ್ಷಾರ್ಹಗಿದ್ದಾರೆ. ಇಸ್ಲಾಮಿನಲ್ಲಿ ಆತ್ಮಹತ್ಯೆಯು ಮಹಾಪಾಪವಾಗಿದೆ.

ಆದ್ದರಿಂದ ನನ್ನ ಕಾರಣದಿಂದಾಗಿ ಯಾವುದೇ ವ್ಯಕ್ತಿಗೂ ರೋಗ ತಗಲಬಾರದು ಎಂಬ ಪ್ರಜ್ಞೆಯು ಮಸೀದಿಗೆ ಹೋಗುವ ಪ್ರತೀಯೋರ್ವ ಸತ್ಯವಿಶ್ವಾಸಿಗಳಲ್ಲಿ ಇರಲೇಬೇಕು. ರೋಗ ಲಕ್ಷಣಗಳು ಅಥವಾ ದೈಹಿಕವಾದ ಅಸ್ವಸ್ಥತೆ ಇದ್ದರೆ ಇನ್ನು ಅಲರ್ಜಿ ಮುಂತಾದ ತೊಂದರೆಗಳಿದ್ದರೆ ಅವರು ಮಸೀದಿಗೆ ಹೊಗಲೇಬೇಕೆಂದು ಹಠ ಹಿಡಿಯಬಾರದು. ಅಥವಾ ಹೋಗಲೇ ಬೇಕೆಂದಿದ್ದರೆ ಅದಕ್ಕೆ ಬೇಕಾದ ಸರ್ವ ಭದ್ರತಾ ವಿಧಾನವನ್ನೂ ಅಳವಡಿಸಿಕೊಳ್ಳಬೇಕು. ವಿದೇಶದಿಂದ ಬಂಧವರು ಸದ್ಯ ಮಸೀದಿಗೆ ಹೋಗದಿರುವುದೇ ಲೇಸು.

ಮಸೀದಿಗೆ ತೆರಳಿ ಹಸ್ತಲಾಘವ ಮಾಡುವುದು ಅಥವಾ ಆಲಿಂಗನ ಮಾಡುವುದು ಅಥವಾ ಸ್ಪರ್ಷಿಸಿ ಮಾತನಾಡಬಾರದು. ಪರಸ್ಪರ ಅಂತರ ಕಾಯ್ದುಕೊಂಡು ನಮಾಝ್ ನಿರ್ವಹಿಸಿ ತಕ್ಷಣ ಮಸೀದಿಯಿಂದ ಹೊರಬರಬೇಕು. ಐಚ್ಚಿಕ ನಮಾಝ್ ಮನೆಯಲ್ಲಿಯೇ ನಿರ್ವಹಿಸಬೇಕು. ಆ ಮೂಲಕ ಸುನ್ನತನ್ನು ಜೀವಂತಗೊಳಿಸಿರಿ.

ಧರ್ಮದ ಒಂದು ಬಹಳ ಮಹತ್ತರವಾದ ಒಂದು ಸಂಕೇತ ಎಂಬ ನೆಲೆಯಲ್ಲಿ ಅಝಾನ್ ಮತ್ತು ಜುಮಾ ನಮಾಝ್ ಸ್ಥಿರವಾಗುವಂತೆ ಮಾಡಿರಿ. ಇದು ಮುಸ್ಲಿಮರ ಕರ್ತವ್ಯವಾಗಿದೆ. ಆದರೆ ಆ ಕರ್ತವ್ಯ ಪಾಲಿಸುವಾಗ ಪರಿಸ್ಥಿತಿಯ ಬಗ್ಗೆ ಅರ್ಥೈಸಿಕೊಳ್ಳಬೇಕು.

ಇಲ್ಲದಿದ್ದರೆ ಮುಂದೆಂದೂ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲಾರದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಅದಕ್ಕೆ ನಾವಾಗಿಯೇ ಅವಕಾಶ ಮಾಡಿಕೊಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ, ಮಸೀದಿ ತೆರೆಯುವಾಗ ಪಾಲಿಸಬೇಕಾದ ಕೆಲವು ನಿಭಂಧನೆಗಳನ್ನು ಗಮನಿಸಲೇಬೇಕು. ಗೌರವಾನ್ವಿತ ವಿದ್ವಾಂಸರಾದ ಇ,ಎನ್. ಅಬ್ದುರ್ರಹ್ಮಾನ್ ಖುನ್ನತ್ ರವರು ಬರೆದ ಕೆಲವು ಸೂಚನೆಗಳು ಈ ಕೆಳಗಿನಂತಿವೆ.

1. ಆರಾಧನಾಲಯಗಳನ್ನು ಆಯಾ ಗ್ರಾಮ ನಿವಾಸಿಗಳು ಮಾತ್ರ ಬಳಸಬೇಕು.

2.ಕಾರ್ಯಕ್ರಮಗಳಲ್ಲಿ ಭಾಗಿಯಾಗುವವರ ಸಂಖ್ಯೆ 50ನ್ನು ಮೀರಬಾರದು.

3.ಹತ್ತು ವಯಸ್ಸಿಗಿಂತ ಕೆಳಗಿನ ಮಕ್ಕಳು ಮತ್ತು ಅರುವತ್ತು ದಾಟಿದ ಹಿರಿಯರು ಭಾಗವಹಿಸಬಾರದು.

4.ಸಂಬಂಧಪಟ್ಟ ವುಝೂ ಮತ್ತಿತರ ಕರ್ಮಗಳನ್ನು ಮನೆಯಲ್ಲಿಯೇ ನಿರ್ವಹಿಸಬೇಕು.

5. ಕಾರ್ಯಕ್ರಮಗಳಲ್ಲಿ ದೈಹಿಕ ಅಂತರವನ್ನು ಕಾಪಾಡಬೇಕು.

6. ಸಾಬೂನು,ಸಾನಿಟೈಸರ್ ಮುಂತಾದ ಅಗತ್ಯ ನಿರ್ದೇಶಗಳನ್ನು ಪಾಲಿಸಬೇಕು.

7. ಕಾರ್ಯಕ್ರಮ ಪ್ರಾರಂಭವಾಗುವ ಐದು ನಿಮಿಶ ಮೊದಲು ಮಾತ್ರ ಮ,ಸೀದಿಯನ್ನು ತೆರೆಯಬೇಕು.

8. ಅರ್ಧ ಘಂಟೆಯೊಳಗೆ ಎಲ್ಲಾ ಕಾರ್ಯಕ್ರಮ ಮುಗಿಸಿ ತಕ್ಷಣ ಅಲ್ಲಿಂದ ತೆರಳಬೇಕು.

9. ಎಲ್ಲಾ ಸತ್ಯವಿಶ್ವಾಸಿಗಳಿಗೆ ಅವಕಾಶ ಲಭಿಸುವಂತೆ ಸತ್ಯವಿಶ್ವಾಸಿಗಳ ಬರುವಿಕೆಯನ್ನು ಬಹಳ ಗಮನವಿಟ್ಟು ನಿಯಂತ್ರಿಸಬೇಕು.

10. ಇಂತಹ ನಿಯಮ ನಿರ್ದೇಶನಗಳು ಮತ್ತು ನಿಯಂತ್ರಣಗಳನ್ನು ಅನುಷ್ಟಾನಕ್ಕೆ ತರಲು ಮಸೀದಿಯ ಆಡಳಿತ ಕಮಿಟಿಗಳು ಜವಾಬ್ದಾರಿಯುತವಾಗಿ ಕಾರ್ಯೋನ್ಮುಖವಾಗಬೇಕಾಗಿದೆ.

11. ಕಾನೂನನ್ನು ಮೀರುವವರ ವಿರುದ್ದ ಸರಕಾರದ ಶಿಕ್ಷಾ ಕ್ರಮಗಳನ್ನು ಅನುಸರಿಸಬೇಕು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.