ರಾಮ್ ಪುರದಲ್ಲಿ ಬಿಜೆಪಿಯನ್ನು ಸೋಲಿಸಿದ ಮಸೀದಿ ಧರ್ಮಗುರು ಮೌಲಾನಾ ಮುಹೀಬುಲ್ಲ ನದ್ವಿ

0
314

ಸನ್ಮಾರ್ಗ ವಾರ್ತೆ

ಅಯೋಧ್ಯೆ ಇರುವ ಫೈಝಾಬಾದ್ ನಲ್ಲೇ ಬಿಜೆಪಿ ಸೋತಿರುವುದು ಹೆಚ್ಚು ಸುದ್ದಿಯಾಯಿತು. ಸುದ್ದಿಯಾದ ಇನ್ನೊಂದು ವಿಷಯ ಎಂದ್ರೆ ಉತ್ತರ ಪ್ರದೇಶದಲ್ಲೇ ರಾಮನ ಹೆಸರಿರುವ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಸೋತಿರುವುದು. ರಾಮ್ ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಿದ್ದು ಒಬ್ಬ ಇಸ್ಲಾಮಿಕ್ ವಿದ್ವಾಂಸ, ಮಸೀದಿಯ ಧರ್ಮಗುರು ಎಂಬುದು ಇನ್ನೊಂದು ವಿಶೇಷ.

ರಾಮ್ ಪುರದಲ್ಲಿ ಮೌಲಾನಾ ಮುಹೀಬುಲ್ಲ ನದ್ವಿಯವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಎಸ್ಪಿ ಅಚ್ಚರಿ ಮೂಡಿಸಿತ್ತು. ಅವರು ಬಿಜೆಪಿ ಅಭ್ಯರ್ಥಿಯನ್ನು 87,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ರಾಮ್ ಪುರ್ ಅಂದ್ರೆ ಎಸ್ಪಿ ಹಿರಿಯ ನಾಯಕ ಅಝಮ್ ಖಾನ್ ರ ಭದ್ರಕೋಟೆ. ಅಲ್ಲಿ ಎಸ್ಪಿ ಪಕ್ಷದಲ್ಲಿ ಏನೇ ಆಗಬೇಕಿದ್ದರೂ ಆಝಮ್ ಖಾನ್ ಬೆಂಬಲ ಬೇಕೇ ಬೇಕು. ಅಝಮ್ ಖಾನ್ ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಮೌಲಾನಾಗೆ ಟಿಕೆಟ್ ಕೊಟ್ಟಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು.

ಆಝಮ್ ಖಾನ್ ಬೆಂಬಲಿಗರೊಬ್ಬರು ತಾವೇ ಪಕ್ಷದ ಅಭ್ಯರ್ಥಿ ಎಂದು ಬಿ ಫಾರ್ಮ್ ಬರೋ ಮೊದಲೇ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸೋ ಕೊನೇ ದಿನದವರೆಗೂ ರಾಮ್ ಪುರಕ್ಕೆ ಎಸ್ಪಿ ಅಧಿಕೃತ ಅಭ್ಯರ್ಥಿಯೇ ಅಂತಿಮ ಆಗಿರಲಿಲ್ಲ. ಕೊನೆ ಗಳಿಗೆಯಲ್ಲಿ ಮೌಲಾನಾ ಮುಹೀಬುಲ್ಲರಿಗೆ ಅಖಿಲೇಶ್ ರ ಕರೆ ಬಂದಿದೆ. ಚಾರ್ಟರ್ಡ್ ವಿಮಾನದಲ್ಲಿ ಬಿ ಫಾರ್ಮ್ ಬಂದು ತಲುಪಿತು. ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆಯಾಗಿತ್ತು.