ಮಕ್ಕಳನ್ನು ಕೊಲ್ಲುತ್ತಿವೆ ಮೆಸೇಜಿಂಗ್ ಆಪ್ ಗಳು: ಯುವ ತಲೆಮಾರನ್ನು ಹಾಳು ಮಾಡುತ್ತಿರುವ ಸಾಮಾಜಿಕ ಜಾಲತಾಣ

0
197

ಸನ್ಮಾರ್ಗ ವಾರ್ತೆ

ಮೊಬೈಲ್ ನಲ್ಲಿ ಮೆಸೇಜಿಂಗ್ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಡ ಎಂದು ತಂದೆ ಮಗಳಿಗೆ ಹೇಳಿದ್ದೇ ಅನಾಹುತಕ್ಕೆ ಕಾರಣವಾಗಿದೆ.

16 ವರ್ಷದ ಮಗಳು ಅಪ್ಪನ ಈ ಬುದ್ಧಿವಾದಕ್ಕೆ ಸಿಟ್ಟಾಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಥಾಣೆಯಲ್ಲಿ. ಸಾಮಾಜಿಕ ಜಾಲತಾಣವು ಯುವ ತಲೆ ಮಾರಿನ ಮೇಲೆ ಬೀರಿರುವ ಒತ್ತಡ ಮತ್ತು ಪ್ರಭಾವವನ್ನು ಈ ಘಟನೆ ಸೂಚಿಸುತ್ತದೆ.

ಫೋನ್ನಲ್ಲಿ ಸ್ನಾ ಪ್ ಚಾಟ್ ಆಪ್ ಅನ್ನು ಈ ಹುಡುಗಿ ಡೌನ್ಲೋಡ್ ಮಾಡಿದ್ದಳು. ಅದು ಗೊತ್ತಾದ ತಂದೆ ಹೀಗೆ ಮಾಡಬಾರದು ಎಂದು ಸಲಹೆ ನೀಡಿದ್ದರು. ಇದಕ್ಕೆ ಸಿಟ್ಟಾದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾನು ಮಲಗಿದ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೊಬೈಲ್ ಅಪ್ಲಿಕೇಶನ್ ಗಳು ಯುವ ಸಮುದಾಯವನ್ನು ಗೀಳಿಗೆ ಹಚ್ಚುತ್ತದೆ ಎಂಬ ಮಾತಿಗೆ ಇದೊಂದು ಉದಾಹರಣೆ ಎಂದು ಅನೇಕರು ಹೇಳಿದ್ದಾರೆ.