ಎತ್ತಿನ ಗಾಡಿಗೂ ಭುಜಕೊಡಬೇಕಾದ ಪರಿಸ್ಥಿತಿ, ಚಕ್ರದ ಬಂಡಿಯಲ್ಲಿ ಗರ್ಭಿಣಿ ಮಹಿಳೆ ಮಗುವನ್ನು ಎಳೆದು 700 ಕಿ.ಮೀ ಪಯಣ: ಇದು ವಲಸೆ ಕಾರ್ಮಿಕರ ಗೋಳಿನ ಕತೆ-ವೀಡಿಯೊ

0
732

ಸನ್ಮಾರ್ಗ ವಾರ್ತೆ

ಕಾಲ್ನಡಿಗೆ, ಲಾರಿಯಲ್ಲಿ ಹತ್ತಿ ಹೇಗಾದರೂ ಮಾಡಿ ಮನೆಗೆ ಸೇರುವುದಕ್ಕಾಗಿ ನೂರಾರು ಕಿಲೋ ಮೀಟರಿನಷ್ಟು ನಡೆಯುವ ಕಷ್ಟದ ಪ್ರಯಾಣ ಹಳೆಯ ದಿನಗಳ ಕಷ್ಟವನ್ನು ನೆನಪಿಸುತ್ತಿದೆ.

ತೆರೆದ ಟ್ರಕ್‍ಗಳಲ್ಲಿ ಕೈಗೂಸು ಹಿಡಿದು ಪ್ರಯಾಣಿಸುತ್ತಿರುವ ಮಹಿಳೆಯರು, ನಡೆದುಕೊಂಡೇ ಸಾಗುತ್ತಿರುವ ತುಂಬು ಗರ್ಭಿಣಿಯರು, ಬರಿಗಾಲಲ್ಲಿ ನಡೆದು ನಡೆದು ಕಾಲು ಕುಂಟುತ್ತಾ ಹೆಜ್ಜೆ ಹೆಜ್ಜೆಗೂ ಅಳುವ ಎಳೆಯ ಮಕ್ಕಳ ದೃಶ್ಯಗಳು ಈಗ ಕಂಡು ಬಂದಿವೆ.

ಹೈದರಾಬಾದಿನಿಂದ ಗರ್ಭಿಣಿ ಪತ್ನಿಯನ್ನು ಮತ್ತು ಕೈಗೂಸನ್ನು ಕೂರಿಸಿ ತಳ್ಳು ಬಂಡಿಯಲ್ಲಿ ಎಳೆಯುತ್ತಾ ಮಧ್ಯಪ್ರದೇಶದ ಹುಟ್ಟೂರಿಗೆ ವಲಸೆ ಕಾರ್ಮಿಕ 700 ಕಿಲೋಮೀಟರ್ ಪ್ರಯಾಣಿಸಿದ್ದಾನೆ. ಲಾಕ್ ‌ಡೌನ್ ಆಗಿರುವುದರಿಂದ ಪ್ರಯಾಣಿಸಲು ಬಸ್ಸು ಇಲ್ಲ , ಟ್ರಕ್ ಕೂಡ ರಾಮುಗೆ ಸಿಗಲಿಲ್ಲ. ನಂತರ ಸಣ್ಣ ಚಕ್ರದ ಮರದ ತುಂಡುಗಳು ಇರುವ ಒಬ್ಬರು ಕುಳಿತು ಕೊಳ್ಳಬಹುದಾದ ಬಂಡಿಯನ್ನು ಮಾಡಿ ಅದರಲ್ಲಿ ಗರ್ಭಿಣಿ ಪತ್ನಿ ಮತ್ತು ಮಗಳನ್ನು ಕುಳ್ಳಿರಿಸಿ ರಾಮು ಪ್ರಯಾಣ ಮಾಡಿದ್ದು ಏಳು ಕಿಲೋ ಮೀಟರ್. ರಾಮು ತಳ್ಳುಗಾಡಿಯನ್ನು ತಳ್ಳುತ್ತಾ ರಸ್ತೆಯಲ್ಲಿ ಹೋಗುತ್ತಿರುವ ದೃಶ್ಯವನ್ನು ಎನ್‍ಡಿಟಿವಿ ಪ್ರತಿನಿಧಿ ಚಿತ್ರೀಕರಿಸಿದ್ದರು. ಇದು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿ ಶೇರ್ ಆಗಿತ್ತು.

ಮಂಗಳವಾರ ಬಾಲ್‍ಗಟ್ ಜಿಲ್ಲೆಯ ಅವರ ಗ್ರಾಮಕ್ಕೆ ರಾಮು ಮತ್ತು ಕುಟುಂಬ ತಲುಪಿದೆ ಎಂದು ಎನ್‍ಡಿಟಿವಿಯೇ ವರದಿ ಮಾಡಿದೆ. ಮೊದಲು ಮಗುವನ್ನು ಎತ್ತಿಕೊಂಡು ನಡೆಯಲು ತೀರ್ಮಾನಿಸಿದ್ದು. ಆದರೆ ಧನವಂತಿ ಗರ್ಭಿಣಿ ಆಕೆಗೆ ಹೆಚ್ಚು ದೂರ ನಡೆಯಲು ಸಾಧ್ಯವಿಲ್ಲ. ಆದ್ದರಿಂದ ದಾರಿಯಲ್ಲಿ ಕುರುಚಲು ಕಾಡಿನಿಂದ ಮರ ಸಂಗ್ರಹಿಸಿ ಒಂದು ತಾತ್ಕಾಲಿಕ ತಳ್ಳು ಬಂಡಿ ನಿರ್ಮಿಸಿದೆ. ಬಾಲ್‍ಘಟ್‍ವರೆಗೆ ಬಂಡಿಯನ್ನು ಎಳೆದು ಬಂದೆ. ಎಂದು ವೀಡಿಯೊ ದೃಶ್ಯದಲ್ಲಿ ರಾಮು ಹೇಳಿದ್ದಾನೆ. ಸಾಕಷ್ಟು ಆಹಾರ ಕೂಡ ಇಲ್ಲದೆ ಹಲವು ದಿವಸ ನಡೆದೆ ಎಂದು ರಾಮು ವಿವರಿಸಿದ್ದಾನೆ.

ಮಹಾರಾಷ್ಟ್ರಕ್ಕೆ ಗಡಿ ದಾಟಿದಾಗ ಗಡಿಯಲ್ಲಿ ತಪಾಸಣೆ ಮಾಡುತ್ತಿದ್ದ ಸಬ್ ಡಿವಿಷನಲ್ ಅಧಿಕಾರಿ ನಿತೇಶ್ ಭಾರ್ಗವರವರ ನೇತೃತ್ವದ ಪೊಲೀಸರು ಮೂವರಿಗೆ ಬಿಸ್ಕೆಟ್, ಆಹಾರ ಕೊಟ್ಟರು. ರಾಮುರ ಮಗುವಿಗೆ ಹೊಸ ಚಪ್ಪಲಿಯನ್ನೂ ಪೊಲೀಸರು ತೆಗೆದು ಕೊಟ್ಟರು. ಪೊಲೀಸರು ಇವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದರು. ತದನಂತರ ವಾಹನದಲ್ಲಿ ಬಾಲ್‍ಘಟ್‍ನ ಅವರ ಗ್ರಾಮಕ್ಕೆ ಕಳುಹಿಸಿಕೊಟ್ಟಿತು. ನಂತರ ಹದಿನಾಲ್ಕು ದಿವಸ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಎನ್‍ಡಿಟಿವಿ ಪ್ರತಿನಿಧಿ ಹಂಚಿಕೊಂಡ ಇನ್ನೊಂದು ವೀಡಿಯೊದಲ್ಲಿ ಮಧ್ಯಪ್ರದೇಶದಿಂದ ಒಂದು ಎತ್ತು ಇನ್ನೊಂದೆಡೆಗೆ ತಾನೆ ಗಾಡಿಯ ನೊಗಕ್ಕೆ ಹೆಗಲು ಕೊಟ್ಟು ಗಾಡಿಯನ್ನು ಎಳೆಯುವ ದೃಶ್ಯ ವೈರಲ್ ಆಗಿದೆ. ಕಾರ್ಮಿಕನಾದ ಸಹೋದರ ಮತ್ತು ಪತ್ನಿಯ ತಾಯಿಯನ್ನು ಎತ್ತಿನಗಾಡಿಯ ಜೊತೆಗೆ ನಡೆದು ಬರುತ್ತಿರುವ ವ್ಯಕ್ತಿಯೊಬ್ಬರನ್ನು ಕಾಣಬಹುದು. ಬೇರೆ ಮಾರ್ಗವಿಲ್ಲದೆ ಮೋವಿಲ್ ಎಂಬಲ್ಲಿನಿಂದ 25 ಕಿಲೊಮೀಟರ್ ದೂರದ ಪತ್ತರ ಮುಂಡ ಗ್ರಾಮಕ್ಕೆ ಎತ್ತಿನ ಬಂಡಿಯಲ್ಲಿ ಪ್ರಯಾಣಿಸಲು ತೀರ್ಮಾನಿಸಿದೆ ಎಂದು ಈ ವ್ಯಕ್ತಿ ಹೇಳಿದರು.

ಲಾಕ್‌ಡೌನ್ ಕಾರಣದಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಕಾಲ್ನಡಿಗೆ ಮೂಲಕವೂ ವಿವಿಧ ವಾಹನ ಮೂಲಗಳಿಂದಲೂ ಪ್ರಯಾಣಿಸಿ ತಮ್ಮ ಊರು ಸೇರಬೇಕೆಂಬ ತವಕದಲ್ಲಿ ನಗರಗಳನ್ನು ತೊರೆದಿದ್ದಾರೆ. ಹಲವರು ನಡೆದು ನಡೆದು ಊರು ಸೇರುವ ಮುನ್ನವೇ ಮೃತರಾಗಿದ್ದಾರೆ. ಅಪಘಾತದಲ್ಲಿ ಮೃತ ಪಟ್ಟ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲಲ್ಲಿ ಸಂಘ-ಸಂಸ್ಥೆಗಳು ನೀಡುತ್ತಿರುವ ಆಹಾರ ಪಾನೀಯ ಕಾರ್ಮಿಕರ ಸಂಕಷ್ಟಕ್ಕೆ ಒಂದಿಷ್ಟು ನಿರಾಳತೆ ನೀಡಿದೆ‌. ಈ ನಡುವೆ ಲಾರಿ, ಬಸ್ಸು ಹಾಗೂ ಇತರೆ ವಾಹನಗಳು ಊರುಗಳಿಗೆ ತಲುಪಿಸಲು ದುಬಾರಿ ಮೊತ್ತವನ್ನು ನಿರ್ಣಯಿಸಿ ದೋಚುತ್ತಿರುವ ಘಟನೆಗಳೂ ನಡೆಯುತ್ತಿವೆ.