ನಾವಿನ್ನು ಯಾವ ಸರಕಾರವನ್ನು ನಂಬುವುದಿಲ್ಲ: ಮತ್ತೊಮ್ಮೆ ಊರಿನತ್ತ ವಲಸೆ ಕಾರ್ಮಿಕರ ಸಾಮೂಹಿಕ ಪಯಣ

0
397

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ಅತ್ಯಂತ ತೀವ್ರವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಿಲ್ಲಿಯಲ್ಲಿ ಒಂದು ವಾರದ ಲಾಕ್‍ಡೌನ್ ಘೋಷಿಸಿದ್ದು ವಲಸೆ ಕಾರ್ಮಿಕರು ಸಾಮೂಹಿಕವಾಗಿ ಊರಿಗೆ ಮರಳಿದ್ದಾರೆ. ಸೋಮವಾರ ರಾತ್ರೆ 10 ರಿಂದ ಎಪ್ರಿಲ್ 26 ಸಂಜೆಯ ಐದು ಗಂಟೆಯವರೆಗೆ ಲಾಕ್‍ಡೌನ್‍ಅನ್ನು ಮುಖ್ಯಮಂತ್ರಿ ಘೋಷಿಸಿದರು.

ಈ ಘೋಷಣೆಯ ಬೆನ್ನಲ್ಲೇ ದಿಲ್ಲಿಯ ಅನಂತ್‍ ವಿಹಾರ ಬಸ್‍ ಟರ್ಮಿನಲ್‍ನಲ್ಲಿ ಕಾರ್ಮಿಕರೊಂದಿಗೆ ತುಂಬಿಕೊಂಡಿತು. ವಿವಿಧ ರಾಜ್ಯಗಳಿಂದ ದಿಲ್ಲಿಗೆ ಬಂದು ಬದುಕುತ್ತಿರುವವರು ಕುಟುಂಬ ಸಮೇತವಾಗಿ ಬಸ್ ನಿಲ್ದಾಣದಲ್ಲಿ ಕಿಕ್ಕಿರಿದು ಬರುತ್ತಿದ್ದರು. ಇದರೊಂದಿಗೆ ಕೊರೋನ ಮಾನದಂಡವು ಹೆಸರಿಗೆ ಮಾತ್ರ ಎಂಬಂತಾದವು. ಪೊಲೀಸರಿಂದಲೂ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ದಿನಗಳ ಲಾಕ್ ಡೌನ್ ಇದೆಂದು ಕೇಜ್ರಿವಾಲ್ ಹೇಳಿದರು. ದಿಲ್ಲಿಯಿಂದ ಹೋಗಬೇಕಾಗಿಲ್ಲ. ಅವರಿಗೆ ಲಾಕ್‍ಡೌನ್ ಸಮಯದಲ್ಲಿ ಎಲ್ಲವನ್ನೂ ಸರಕಾರ ಕೊಡುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ವಲಸೆ ಕಾರ್ಮಿಕರಿಗೆ ಈ ಮಾತಿನಲ್ಲಿ ನಂಬಿಕೆಯಿಲ್ಲ.

ನಾನು ದಿನಗೂಲಿ ಕಾರ್ಮಿಕ. ಪೈಂಟಿಂಗ್ ಇನ್ನಿತರ ಕೆಲಸಗಳೇ ನನ್ನ ಕಾರ್ಯ. ಈಗ ನನ್ನ ಯಜಮಾನ ಪರಿಸ್ಥಿತಿ ಸರಿಯಾಗುವವರೆಗೂ ಕೆಲಸ ಕೊಡಲು ಬರುವುದಿಲ್ಲ. ಕಳೆದ ಬಾರಿಯಂತೆ ಲಾಕ್‍ಡೌನ್ ಮುಂದುವರಿಕೆಯಾಗಬಹುದು ಎಂದು ನಮಗೆ ಗೊತ್ತು. ಆದರೆ ಈ ಸಲ ಸರಕಾರದ ಸಾವಿನ ಬಾಯಿಗೆ ಸೇರುವುದಕ್ಕಾಗಿ ನಾವು ದಿಲ್ಲಿಯಲ್ಲಿ ಇರುವುದಿಲ್ಲ. ನಾವು ಇನ್ನು ಯಾವ ಸರಕಾರವನ್ನು ನಂಬುವುದಿಲ್ಲ. ನಾನು ಉತ್ತರಪ್ರದೇಶದ ಗೊಂಡಕ್ಕೆ ಕುಟುಂಬ ಸಹಿತ ಹೋಗುತ್ತೇನೆ. ನನಗೆ ಕೊರೊನ ಹೆದರಿಕೆಯಲ್ಲಿ ದಿಲ್ಲಿ ಪರಿಸ್ಥಿತಿ ಉತ್ತಮಗೊಳ್ಳದಿದ್ದರೆ ನನ್ನ ಮಕ್ಕಳು ಹಸಿದು ಸಾಯಬೇಕಾದೀತು ಎಂದು ಹೆದರುತ್ತೇನೆ. ಆದ್ದರಿಂದ ಈಗ ದಿಲ್ಲಿಯಿಂದ ಊರಿಗೆ ಹೋಗುತ್ತೇನೆ ಎಂದು ಕಾರ್ಮಿಕ ರಮೇಶ್‍ ಅಳಲು ತೋಡಿಕೊಂಡಿದ್ದಾರೆ.