ಇರಾನಿನಲ್ಲಿ 1200ಕ್ಕಿಂತಲೂ ಅಧಿಕ ಮಂದಿ ಸಾವು: 25 ಆಸ್ಪತ್ರೆಗಳ ಮೇಲೆ ದಾಳಿ

0
472

ಸನ್ಮಾರ್ಗ ವಾರ್ತೆ

ಯುದ್ಧವು ಇರಾನಿನ ಜನಜೀವನದ ಮೇಲೆ ಭಾರಿ ಪರಿಣಾಮವನ್ನು ಬೀರಿದೆ. ಈವರೆಗೆ 25 ಆಸ್ಪತ್ರೆಗಳ ಮೇಲೆ ಇಸ್ರೇಲ್ ಮತ್ತು ಅಮೆರಿಕಗಳು ದಾಳಿ ಮಾಡಿವೆ. ಈ ಆಕ್ರಮಣದಿಂದ 1200 ಕ್ಕಿಂತಲೂ ಅಧಿಕ ಮಂದಿ ಹತ್ಯೆಗೀಡಾಗಿದ್ದಾರೆ. ಇದರಲ್ಲಿ 12 ವಯಸ್ಸಿಗಿಂತ ಕೆಳಗಿನ 200 ಕ್ಕಿಂತಲೂ ಅಧಿಕ ಮಕ್ಕಳಿದ್ದಾರೆ. 200 ಕ್ಕಿಂತಲೂ ಅಧಿಕ ಮಹಿಳೆಯರಿದ್ದಾರೆ. 10,000 ಕ್ಕಿಂತಲೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಇವರಲ್ಲಿ 1400 ರಷ್ಟು ಮಹಿಳೆಯರಿದ್ದಾರೆ. 9 ಆಸ್ಪತ್ರೆಗಳ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 18 ಪ್ರೀ ಹಾಸ್ಪಿಟಲ್, ಎಮರ್ಜೆನ್ಸಿ ಬೇಸ್ ಗಳು ಮತ್ತು ಹದಿನಾಲ್ಕು ಆಂಬುಲೆನ್ಸ್ ಗಳು ನಾಶವಾಗಿವೆ. 17 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎರಡು ಗ್ರಾಮೀಣ ಆರೋಗ್ಯ ಕೇಂದ್ರಗಳು ಕೂಡ ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ನಾಶವಾಗಿದೆ.

ಈ ಘಟನೆಗೆ ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಟೆಡ್ರೋಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ದಾಳಿ ಆರಂಭಿಸಿದ ಬಳಿಕ ಶಾಲೆಗಳು ಆಸ್ಪತ್ರೆಗಳು ಮತ್ತು ಐತಿಹಾಸಿಕ ಸ್ಥಳಗಳ ಮೇಲೆ ಸಾಕಷ್ಟು ದಾಳಿ ನಡೆದಿದೆ.