ಮೂಡ ಪ್ರಕರಣ: ನಾಲ್ಕು ಲೋಕಾಯುಕ್ತ ತನಿಖಾ ತಂಡದ ರಚನೆ; ಸಿಎಂಗಿಲ್ಲ ಸಧ್ಯ ತನಿಖೆಯ ಟೆನ್ಶನ್

0
141

ಸನ್ಮಾರ್ಗ ವಾರ್ತೆ

ಮೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ನಾಲ್ಕು ತನಿಖಾ ತಂಡವನ್ನು ರಚಿಸಿ ಅಕ್ರಮದ ಜಾಲಭೇದಿಸಲು ಫೀಲ್ಡ್ ಗೆ ಇಳಿದಿದ್ದಾರೆ.

ಆದರೆ ಪ್ರಕರಣದ ಮೊದಲ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯರಿಗೆ ಸದ್ಯಕ್ಕೆ ಯಾವುದೇ ಲೋಕಾಯುಕ್ತ ತನಿಖೆ ಟೆನ್ಶನ್ ಇಲ್ಲ ಎಂದು ಹೇಳಲಾಗುತ್ತಿದೆ.

ಆರಂಭದಲ್ಲಿ ದಾಖಲೆಗಳನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ನೂರಾರು ದಾಖಲೆ ಪ್ರತಿಯನ್ನು ಮುಡ ಕಛೇರಿ, ತಹಸಿಲ್ದಾರ್ ಕಚೇರಿ, ಸಬ್ ರಿಜಿಸ್ಟರ್ ಕಚೇರಿ ಸೇರಿ ದೂರುದಾರರಿಂದಲೂ ದಾಖಲೆಗಳ ಕಲೆ ಹಾಕಲಾಗುತ್ತೆ. ನಂತರ ದೂರುದಾರರಿಂದ ಲೋಕಾಯುಕ್ತ ಪೊಲೀಸರು ಮಾಹಿತಿ ಕೇಳಲಿದ್ದಾರೆ.

ಪ್ರಮುಖವಾಗಿ ಎರಡು ಆಯಾಮದಲ್ಲಿ ದಾಖಲೆ ಪಡೆಯಲಿರುವ ಪೊಲೀಸರು ಮೊದಲ ಆಯಾಮದಲ್ಲಿ ಜಮೀನು ವಾರಸದಾರನಿಗೆ ಸಂಬಂಧಪಟ್ಟ ಡಾಕ್ಯುಮೆಂಟ್ ಗಳು ಎರಡನೇ ಆಯಾಮದಲ್ಲಿ ಸಿಎಂ ಮತ್ತು ಸಿಎಂ ಪತ್ನಿ ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಸಂಬಂಧಿಸಿದ ಪತ್ರಗಳನ್ನು ಸಂಗ್ರಹಿಸಲು ನಿರ್ಧರಿಸಿದ್ದಾರೆ. ನಂತರ ಆರೋಪಿಗಳ ವಿಚಾರಣೆ ನಡೆಯಲಿದೆ ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಸಧ್ಯ ತನಿಕೆಯ ಟೆನ್ಶನ್ ಇಲ್ಲ.