ಇನ್ನು ನಿಖಾಹ್ ಹಲಾಲ, ಬಹುಪತ್ನಿತ್ವದ ವಿರುದ್ಧ ಹೋರಾಟ-ಮುಖ್ತಾರ್ ಅಬ್ಬಾಸ್ ನಕ್ವಿ ಸಹೋದರಿ ಫರ್‍ಹತ್ ನಕ್ವಿ

0
659

ಉತ್ತರಪ್ರದೇಶ, ಆ. 1: ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿಯವರ ಸಹೋದರಿ ಫರ್‍ಹತ್ ನಕ್ವಿ ಸ್ವಯಂ ತ್ರಿವಳಿ ತಲಾಕ್ ನ ಬಲಿಪಶು ಆಗಿದ್ದಾರೆ. ಮಂಗಳವಾರ ತ್ರಿವಳಿ ತಲಾಕ್ ನಿಷೇಧ ಕಾನೂನು ಜಾರಿಯಾಗಿದ್ದು ಅವರಂತಹ ಅನೇಕ ಲಕ್ಷಾಂತರ ಮುಸ್ಲಿಂ ಮಹಿಳೆಯರ ಹೋರಾಟ ಸಫಲವಾಗಿದೆ. ಆದರೆ ಅವರ ಹೋರಾಟ ಇಲ್ಲಿಗೆ ಮುಗಿದಿಲ್ಲ.

ಇನ್ನು ನಿಖಾಹ್ ಹಲಾಲ ಮತ್ತು ನಾಲ್ವರು ಪತ್ನಿಯರನ್ನು ಹೊಂದುವ ಸಂಪ್ರದಾಯದ ವಿರುದ್ಧ ಹೋರಾಟ ನಡೆಸಲಿದ್ದಾರೆ. ತ್ರಿವಳಿ ತಲಾಕ್ ಮಸೂದೆ ಕಾನೂನಿನ ರೂಪ ಪಡೆದಿರುವುದು ಮುಸ್ಲಿಮ್ ಮಹಿಳೆಯರ ಪಾಲಿಗೆ ಒಂದು ಕ್ರಾಂತಿಯಾಗಿದೆ. ಇದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ. ಈಗ ಒಬ್ಬಳೇ ಮಗಳನ್ನು ಹೊಂದಿದವರು ಕೂಡಾ ಹೆದರಬೇಕಾಗಿಲ್ಲ. ಅವರಿಗೆ ತ್ರಿವಳಿ ತಲಾಕ್ ನ ಕಷ್ಟ ಅನುಭವಿಸಬೇಕಾಗಿ ಬರುವುದಿಲ್ಲ ಎಂದು ಫರ್‍ಹತ್ ಹೇಳಿದರು. ಫರ್ಹತ್ ನಕ್ವಿ ತನ್ನ ತ್ರಿವಳಿ ತಲಾಕ್ ವಿರುದ್ಧ ಹೋರಾಟವನ್ನು ವಿವರಿಸುತ್ತಾ ತನ್ನ ಮದುವೆ 2005ರಲ್ಲಿ ಆಗಿತ್ತು 2007ರಲ್ಲಿ ತನ್ನ ಪುತ್ರಿ ಒಂದೂವರೆ ತಿಂಗಳು ಆಗಿದ್ದಾಗ ಪತಿ ವಿನಾಕಾರಣ ತ್ರಿವಳಿ ತಲಾಕ್ ಹೇಳಿದ್ದನ್ನು ಅವರು ಸ್ಮರಿಸಿಕೊಂಡರು. ಶಿಯ ಮುಸ್ಲಿಮರ ನಡುವೆ ತ್ರಿವಳಿ ತಲಾಕ್ ಅಸ್ವೀಕಾರಾರ್ಹವಾಗಿದೆ. ತನ್ನ ಹೋರಾಟವನ್ನು ಮುಂದುವರಿಸಿದಾಗ ತ್ರಿವಳಿ ತಲಾಕ್ ಗೆ ಸಿಲುಕಿದ ಲಕ್ಷಾಂತರ ಮಂದಿ ಇದ್ದಾರೆ ಎನ್ನುವುದು ತನಗೆ ಗೊತ್ತಾಯಿತು ಎಂದು ಫರ್ಹತ್ ಹೇಳಿದರು.