ಮಸ್ಕತ್: ಬಕ್ರೀದ್ ವೇಳೆ 210 ಕಾನೂನು ಉಲ್ಲಂಘನೆಗಳು ಪತ್ತೆ

0
219

ಸನ್ಮಾರ್ಗ ವಾರ್ತೆ

ಮಸ್ಕತ್, ಜೂ, 26: ಬಕ್ರೀದ್ ಸಮಯದಲ್ಲಿ ಇಲ್ಲಿನ ವಿವಿಧ ಗವರ್ನರೇಟ್‍ಗಳಲ್ಲಿ ಬಳಕೆದಾರ ಸಂರಕ್ಷಣಾ ಪ್ರಾಧಿಕಾರ ಸಿಪಿಎ ನಡೆಸಿದ ತಪಾಸಣೆಯಿಂದ 210 ಕಾನೂನು ಉಲ್ಲಂಘನೆಗಳು ಪತ್ತೆಯಾಗಿದೆ.

ಮಾಂಸದಂಗಡಿಗಳು, ತರಕಾರಿ, ಹಣ್ಣು ಹಂಪಲು ಅಂಗಡಿಗಳು ಮಾರುಕಟ್ಟೆಗಳು. ವಾಣಿಜ್ಯ ಸಮುಚ್ಚಯಗಳು , ಮಹಿಳಾ ಸೌಂದರ್ಯ ಕೇಂದ್ರಗಳು, ಪುರುಷರ ಸಲೂನ್‍ಗಳು, ದರ್ಜಿ ಅಂಗಡಿಗಳು ಹಲವು ಕಡೆಗಳಲ್ಲಿ ಒಟ್ಟು 12,337 ಭೇಟಿ ಕಾರ್ಯವನ್ನು ಸಿಪಿಎ ತಂಡ ನಡೆಸಿದ್ದು 210 ಕಾನೂನು ಉಲ್ಲಂಘಿಸಿದ ಪ್ರಕರಣಗಳು ಬಹಿರಂಗವಾಗಿದೆ.

ಮುನ್ಸೂಚನೆ ನೀಡದೆ ಅನಧಿಕೃತವಾಗಿ ಬೆಲೆ ಹೆಚ್ಚಳ ಮಾಡಿದ 34 ಪ್ರಕರಣಗಳು, ಸರಿಯಾದ ಸಮಯಕ್ಕೆ ಸಾಮಾನು ವಿತರಿಸದಿರುವುದು ಮತ್ತು ಹೇಳಿದ ಸೇವೆಯನ್ನು ಪೂರ್ಣಗೊಳಸದಿರುವ 20 ಪ್ರಕರಣಗಳು ಪತ್ತೆಯಾಗಿದೆ. ಉತ್ಪನ್ನಗಳಲ್ಲಿ ಲೇಬಲ್ ಇಲ್ಲದ್ದ 55 ಪ್ರಕರಣಗಳು, ಇನ್‍ವಾಯ್ಸುಗಳು ನೀಡಲು ವಿಫಲವಾದ 44 ಪ್ರಕರಣಗಳು ಹೀಗೆ ಒಟ್ಟು 210 ಪ್ರಕರಣಗಳು ಬೆಳಕಿಗೆ ಬಂದಿವೆ.

ಇಷ್ಟೇ ಅಲ್ಲದೇ ಯಾವುದಾದರೂ ಕಾನೂನು ಉಲ್ಲಂಘಿಸಿದ ಘಟನೆಗಳು ಗಮನಕ್ಕೆ ಬಂದರೆ ಟೋಲ್ ಫ್ರೀ ಕನ್ಸ್ಯೂಮರ್ ಲೈನ್ , ಸಿಪಿಎಯ ಸಾಮಾಜಿಕ ಮಾಧ್ಯಮ ಖಾತೆಗಳು, ಮಾರ್ಕೆಟುಗಳಲ್ಲಿರುವ ಸಿಪಿಎ ಇನ್ಸ್‍ಪೆಕ್ಟರ್‍ ಗಳಿಗೆ ನೇರವಾಗಿ ತಿಳಿಸುವುದು ಇತ್ಯಾದಿ ಕ್ರಮಕ್ಕೆ ಸಾರ್ವಜನಿಕರು ಮುಂದಾಗಬೇಕೆಂದು ಅಧಿಕಾರಿಗಳು ಹೇಳಿದ್ದಾರೆ.