ಮುಸ್ಲಿಂ ದ್ವೇಷದ ಕಾಫಿ ಪರ್ ಕುರುಕ್ಷೇತ್ರ ಕಾರ್ಯಕ್ರಮ: ಇಂಡಿಯಾ ಟಿವಿ ಆಂಕರ್ ಸೌರಭ್ ಶರ್ಮ ವಿರುದ್ಧ ದೂರು ದಾಖಲು

0
145

ಸನ್ಮಾರ್ಗ ವಾರ್ತೆ

ಇಂಡಿಯಾ ಟಿವಿ ಮತ್ತು ಅದರ ಆಂಕರ್ ಸೌರವ್ ಶರ್ಮ ಅವರ ವಿರುದ್ಧ ದಿ ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ ಅಥವಾ ಸಿಜೆಪಿ ಸಂಸ್ಥೆಯು ಪ್ರಕರಣ ದಾಖಲಿಸಿದೆ.

ಅವರು ನಡೆಸಿಕೊಡುವ ಕಾಫಿ ಪರ್ ಕುರುಕ್ಷೇತ್ರ ಎಂಬ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗಿದೆ, ಇಸ್ಲಾಂ ವಿರೋಧಿ ಭಾವನೆಯನ್ನು ಹಬ್ಬಿಸಲಾಗಿದೆ ಮತ್ತು ಕಾರ್ಯಕ್ರಮದ ಉದ್ದಕ್ಕೂ ಮುಸ್ಲಿಮರನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶರ್ಮಾ ಅವರು ತಮ್ಮ ಕಾರ್ಯಕ್ರಮದಲ್ಲಿ ಬಹ್ರಾಚ್ ಗಲಭೆಯನ್ನು ಜನಲೈಸ್ ಮಾಡಿದ್ದಾರೆ, ಈ ಗಲಭೆಯ ಬಗ್ಗೆ ಕೇವಲ ಮುಸ್ಲಿಮರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಿದ್ದಾರೆ ಮತ್ತು ಮುಸ್ಲಿಮರನ್ನು ಉಗ್ರವಾದಿಗಳು ಎಂದು ಕೂಡ ಕರೆದಿದ್ದಾರೆ. ಮುಸ್ಲಿಂ ಬಾಹುಳ್ಯ ಪ್ರದೇಶವನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಹೇಳುವ ಮೂಲಕ ಮುಸ್ಲಿಮರನ್ನು ಸ್ಟೀರಿಯೋ ಟೈಪ್ದ್ ಆಗಿ ಚಿತ್ರಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆಂಕರ್ ಒಂದು ಸಮುದಾಯದ ಪರ ಮಾತಾಡುವುದು ಮತ್ತು ಇನ್ನೊಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಕೋಮು ಪ್ರಚೋದನೆಗೆ ಮತ್ತು ಘರ್ಷಣೆಗೆ ಕಾರಣವಾಗಬಹುದು. ಶರ್ಮ ಅವರು ಸಂಪೂರ್ಣವಾಗಿ ಮುಸ್ಲಿಂ ಭೀತಿಯ ವಾತಾವರಣವನ್ನು ನಿರ್ಮಿಸಲು ತನ್ನ ಕಾರ್ಯಕ್ರಮದ ಉದ್ದಕ್ಕೂ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.