ದೆಹಲಿ ಮತ್ತು ಹರಿಯಾಣಗಳಲ್ಲಿ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಬಲವಂತದಿಂದ ಮತಾಂತರಿಸಲಾಗುತ್ತಿರುವ ಆರೋಪ: ಗುಂಪು ಹತ್ಯೆ, ವ್ಯಾಪಾರ ಬಹಿಷ್ಕಾರದ ಬಳಿಕದ ಬೆಳವಣಿಗೆ- ಆತಂಕ

0
3655

ಸನ್ಮಾರ್ಗ ವಾರ್ತೆ

ನವದೆಹಲಿ, ಮೇ 15: ಮುಸ್ಲಿಮರ ಮೇಲೆ ನಡೆದ ಜನರ ಗುಂಪುದಾಳಿ ಮತ್ತು ವ್ಯಾಪಾರ ಬಹಿಷ್ಕಾರಕ್ಕೆ ಕಾರಣವಾದ ಕೊರೋನಾ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಮುಸ್ಲಿಮರ ವಿರುದ್ಧ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳು ಪ್ರಾರಂಭಿಸಿದ ದ್ವೇಷ ಅಭಿಯಾನಗಳು ಆರಂಭಗೊಂಡಿದ್ದವು. ಎಷ್ಟರವರೆಗೆಂದರೆ ಟಿವಿ ಚಾನೆಲ್‌ಗಳೂ ಕೂಡ ಮುಸ್ಲಿಮರ ವಿರುದ್ಧ ದ್ವೇಷವನ್ನು ಕಾರಿದವು. ತದನಂತರ ದೆಹಲಿಯ ಬವಾನಾ ಪ್ರದೇಶದ-ಹರಿಯಾಣದ ಸೋನೆಪತ್ ಜಿಲ್ಲೆಯ ಗಡಿಯಲ್ಲಿ ಹಲವಾರು ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಬಲವಂತದಿಂದ ಮತಾಂತರಗೊಳಿಸಲಾಗುತ್ತಿದೆ.

ಬಲವಂತದ ಮತಾಂತರಕ್ಕೆ ಇತ್ತೀಚಿನ ಉದಾಹರಣೆ ಬವಾನಾ ಪ್ರದೇಶದ ಹರೇವಾಲಿ ಗ್ರಾಮದಿಂದ ಬಂದಿದ್ದು, ಸುಮಾರು 60 ಸದಸ್ಯರನ್ನು ಹೊಂದಿರುವ ಎಲ್ಲಾ 12 ಮುಸ್ಲಿಂ ಕುಟುಂಬಗಳನ್ನು ಮೇ 5 ರಂದು ಬಲವಂತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಯಿತು. ಇದೇ ಗ್ರಾಮದ ಮುಸ್ಲಿಂ ಯುವಕ ದಿಲ್ಶಾದ್, ಏಪ್ರಿಲ್ 6 ರಂದು ಭೋಪಾಲ್‌ನ ತಬ್ಲಿಘಿ ಜಮಾಅತ್ ಕಾರ್ಯ ಕ್ರಮದಿಂದ ಹಿಂದಿರುಗಿದ ಹಿಂದೂ ಜಾಟ್ ಸಮುದಾಯದ ಯುವಕರು ನಿಷ್ಕರುಣೆಯಿಂದ ಥಳಿಸಿದರು. ಹಲ್ಲೆಯ ವಿಡಿಯೋ ಚಿತ್ರಿಸಿ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಿದ ಆರೋಪಿ, ಈಗ ದಿಲ್ಶಾದ್ ಅವರಿಗೆ ಪೊಲೀಸ್ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆಯೊಡ್ಡುತ್ತಿದ್ದಾನೆ.

ಮುಸ್ಲಿಂ ಕುಟುಂಬಗಳ ಐದು ಹಿರಿಯರನ್ನು ಇಡೀ ಹಳ್ಳಿಯವರ ಉಪಸ್ಥಿತಿಯಲ್ಲಿ ಬಲವಂತವಾಗಿ ಹಳ್ಳಿಯ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು “ಶುದ್ಧಿಕರಣ್” ಅಥವಾ ಮತಾಂತರ ನಡೆಸುವ ನೇಮದಲ್ಲಿ ಗೋ ಮೂತ್ರದ ಹನಿಗಳನ್ನು ಕುಡಿಸಲಾಯ್ತು” ಎಂದು ಗ್ರಾಮಸ್ಥರೋರ್ವರು ಇಂಡಿಯಾ ಟುಮಾರೋಗೆ ತಿಳಿಸಿದರು.

ದೇವಾಲಯದಲ್ಲಿ ಈ ಆಚರಣೆಗಳ ನಂತರ, ಮುಸ್ಲಿಂ ಹಿರಿಯರಿಗೆ ಅವರು ಮತ್ತು ಅವರ ಕುಟುಂಬ ಸದಸ್ಯರಿಗೆ “ಇಂದಿನಿಂದ ನೀವು ಹಿಂದೂಗಳಾಗಿದ್ದೀರಾ ಮತ್ತು ಇಸ್ಲಾಂ ಧರ್ಮದಲ್ಲಿ ಮಾಡುವ ‘ನಮಾಜ್’ ಮಾಡುವುದು, ಉಪವಾಸವನ್ನು ಆಚರಿಸುವುದು ಅಥವಾ ಸತ್ತವರನ್ನು ಸಮಾಧಿ ಮಾಡುವುದು ಮುಂತಾದವುಗಳನ್ನು ಆಚರಿಸುವಂತಿಲ್ಲ” ಎಂದು ಎಚ್ಚರಿಕೆ ನೀಡಲಾಯ್ತು. “ಹಳ್ಳಿಯಲ್ಲಿ ಹಿಂದೂಗಳು ಮಾಡುವ ರೀತಿಯಲ್ಲಿ ಶವಸಂಸ್ಕಾರ ಮಾಡುಬೇಕು ಅಥವಾ ಶವಗಳನ್ನು ಸುಡಬೇಕು ಎಂದು ನಮಗೆ ತಿಳಿಸಲಾಯಿತು ”ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಮುಸ್ಲಿಮರು ತಮ್ಮ ಸತ್ತವರನ್ನು ಸ್ಮಶಾನದಲ್ಲಿ ಹೂಳುತ್ತಿದ್ದರು, ಅದು ಒಂದು ‘ಕಿಲಾ’ ಅಥವಾ ದೊಡ್ಡ ಪ್ರದೇಶವಾಗಿದ್ದು ಹಲವಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯಾಗಿದೆ. ಹಿಂದೂಗಳು ಗ್ರಾಮದ ಮುಸ್ಲಿಮರ ಸ್ಮಶಾನವನ್ನು “ಗೋ ಶಾಲಾ” (ಹಸು ಶೆಡ್) ಗೆ ಕೇಳಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮಸ್ಥರಿಂದ ದೌರ್ಜನ್ಯ ನಡೆಯುವ ಭೀತಿಯಿಂದಾಗಿ ಮುಸ್ಲಿಮರು “ಶುದ್ಧಕರಣ” ಪ್ರಕ್ರಿಯೆಯನ್ನು ವಿರೋಧಿಸಲಿಲ್ಲ ಎಂದು ಗ್ರಾಮಸ್ಥ ಹೇಳಿದರು. “ನಾವು ದೇವಾಲಯದಲ್ಲಿನ ಆಚರಣೆಗಳ ಮೂಲಕ ಹೋದರೂ, ನಾವು ಮುಸ್ಲಿಮರಾಗಿಯೇ ಮುಂದುವರಿಯುತ್ತೇವೆ ಮತ್ತು ಮುಸ್ಲಿಮರಾಗಿಯೇ ಸಾಯುತ್ತೇವೆ “ಎಂದು ಗ್ರಾಮಸ್ಥರು ಹೇಳಿದರು.

ಮುಸ್ಲಿಮರು ರಮಝಾನ್ ಆಚರಿಸುತ್ತಾರೆಯೇ ಎಂದು ಕೇಳಿದಾಗ, “ನಮ್ಮ ಹಿಂದೂ ನೆರೆಹೊರೆಯವರು ತಿಳಿಯದಂತೆ ನಾವು ಶೀಘ್ರವಾಗಿ ನಮ್ಮ ಮನೆಗಳೊಳಗೆ ಉಪವಾಸ ವ್ರತ ಹಾಗೂ ನಮಾಝ್ ಮಾಡುತ್ತಿದ್ದೇವೆ” ಎಂದು ಹೇಳಿದರು. ರಮಝಾನ್ ಮತ್ತು ಲಾಕ್ ಡೌನ್ ಮುಗಿದ ನಂತರ ಮುಸ್ಲಿಮರು ಪೊಲೀಸರೊಂದಿಗೆ ಈ ವಿಷಯವನ್ನು ತಿಳಿಸಲಿದ್ದಾರೆ ಎಂದು ಅವರು ಹೇಳಿದರು.

ಹರೇವಾಲಿಯಲ್ಲಿ ಮಸೀದಿ ಇಲ್ಲ. ಹತ್ತಿರದ ಮಸೀದಿ ಗ್ರಾಮದಿಂದ ಆರು ಕಿಲೋಮೀಟರ್ ದೂರದಲ್ಲಿರುವ ಬವಾನಾದಲ್ಲಿದೆ. “ನಾವು ಶುಕ್ರವಾರ ಸಾಮೂಹಿಕ ಪ್ರಾರ್ಥನೆಗಾಗಿ ಬವಾನಾಗೆ ಹೋಗುತ್ತಿದ್ದೆವು. ಆದರೆ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದುದರಿಂದ ಸಾಮೂಹಿಕ ಪ್ರಾರ್ಥನೆಗಳಿಗೆ ಅವಕಾಶವಿಲ್ಲದ್ದರಿಂದ ನಾವು ಈಗ ಬವಾನಾ ಮಸೀದಿಗೆ ಹೋಗಿಲ್ಲ” ಎಂದು ಗ್ರಾಮಸ್ಥರು ಹೇಳಿದರು.

ಅವರು ಹೇಳಿದರು, “ನಾವು ಹಳ್ಳಿಯಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದೇವೆ. ಆದರೆ ಇಂತಹ ಅಹಿತಕರ ಘಟನೆ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. 1947ರ ವಿಭಜನೆಯ ದಿನಗಳಲ್ಲಿ, ಕೆಲವು ಮುಸ್ಲಿಮರು ಭಯದಿಂದ ತಮ್ಮ ಹೆಸರನ್ನು ಹಿಂದೂ ಧ್ವನಿಸುವ ಹೆಸರುಗಳಾಗಿ ಬದಲಾಯಿಸಿದ್ದರು. ಆದರೆ ಯಾರೂ ನಮ್ಮ ಹಿರಿಯರನ್ನು ಮತಾಂತರಕ್ಕಾಗಿ ಒತ್ತಾಯಿಸಿರಲಿಲ್ಲ. ಕಲ್ಪಿತ ಮುಸ್ಲಿಂ ವಿರೋಧಿ ಸುದ್ದಿಗಳಿಗೆ ಮಾಧ್ಯಮಗಳು ಪ್ರಚಾರ ನೀಡುವ ಮೂಲಕ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ. ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂಗಳಲ್ಲಿ ದ್ವೇಷದ ಭಾವನೆ ಗಾಢವಾಗಿದೆ.
ಮರ್ಕಜ್ ತಬ್ಲಿಘಿ ಜಮಾತ್‌ ಕುರಿತ ಅಪಪ್ರಚಾರದಿಂದಾಗಿ ಮಸ್ಲಿಮರನ್ನು ಕೊರೋನಾ ವೈರಸ್ ಹರಡುವಿಕೆಗೆ ಕಾರಣ ಎಂಬಂತೆ ನೋಡಲಾಗುತ್ತಿದೆ. ಮಾಧ್ಯಮಗಳು ಈ ಸುದ್ದಿಯನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಪ್ರಸಾರವನ್ನು ಮಾಡಿದುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಹಿಂದೂಗಳು ಒತ್ತಡ ಪೂರ್ವಕವಾಗಿ ಮನೆಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡದಿದ್ದರೇ ಗ್ರಾಮದ ಮುಸ್ಲಿಮರು ಗ್ರಾಮವನ್ನು ತೊರೆಯಲು ನಿರ್ಧರಿಸುತ್ತಾರೆಯೇ ಎಂದು ಕೇಳಿದಾಗ, ಮತ್ತೊಬ್ಬ ಗ್ರಾಮಸ್ಥ, “ನಮ್ಮ ಕೃಷಿ ಮತ್ತು ಇತರ ಭೂಮಿಯನ್ನು ನಾವು ಹಳ್ಳಿಯಲ್ಲಿ ಹೊಂದಿದ್ದೇವೆ ವಲಸೆಯ ಕುರಿತುನಾವು ನಮ್ಮ ನಡುವೆ ಚರ್ಚಿಸುತ್ತಿದ್ದೇವೆ ಮತ್ತು ಕೆಲವು ಸಂದರ್ಭಗಳಲ್ಲಿ ಏನು ಮಾಡಬೇಕೆಂದು ಕೆಲವರು ಸಲಹೆ ನೀಡುತ್ತಿದ್ದಾರೆ. ವಲಸೆಯು ನಮ್ಮ ಕೊನೆಯ ಆಯ್ಕೆಯಾಗಿದೆ. ಎಲ್ಲಾ ಇತರ ಆಯ್ಕೆಗಳು ವಿಫಲವಾದಾಗ ನಾವು ಅದನ್ನು ಬಳಸುತ್ತೇವೆ”ಎಂದರು.

ಇನ್ನೊಬ್ಬ ಹರೇವಾಲಿ ಗ್ರಾಮಸ್ಥರ ಪ್ರಕಾರ, ಹರೇವಾಲಿಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ನಾಗಲ್ ಗ್ರಾಮದ ಹಿಂದೂಗಳು 6 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. “ಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಹಿಂದೂ ಯುವಕರು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಮತ್ತು ಅವರು ಮತಾಂತರಗೊಳ್ಳದಿದ್ದರೆ ಅವರನ್ನು ಹಳ್ಳಿಯಲ್ಲಿ ವಾಸಿಸಲು ಅನುಮತಿಸುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಹರಿಯಾಣದ ಸೋನೆಪತ್ ಜಿಲ್ಲೆಯ ಹರೇವಾಲಿಯಿಂದ ಆರು ಕಿಲೋ ಮೀಟರ್ ದೂರದಲ್ಲಿರುವ ಜಿಂಜೋಲಿ ಗ್ರಾಮದಲ್ಲಿರುವ ಅವರ ಸಂಬಂಧಿಕರಿಗೂ ಸಹ ಸ್ಥಳೀಯ ಹಿಂದೂಗಳು ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ ಮತ್ತು ಆಜ್ಞೆಯನ್ನು ಪಾಲಿಸದಿದ್ದಲ್ಲಿ ಗಂಭೀರ ಬೆದರಿಕೆ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹರಿಯಾಣದ ಇತರ ಹಲವಾರು ಹಳ್ಳಿಗಳಿಂದ ಮತಾಂತರದ ಘಟನೆಗಳು ವರದಿಯಾಗಿವೆ. ವರದಿಗಳ ಪ್ರಕಾರ, ಹಿಸ್ಸಾರ್‌ನ ಬಿಧ್ಮಿರಾ ಗ್ರಾಮದಲ್ಲಿ 40 ಮುಸ್ಲಿಂ ಕುಟುಂಬಗಳ 260 ಸದಸ್ಯರು ಮೇ 8 ರಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂದು ವರದಿಗಳು ಹೇಳುತ್ತವೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಮರಿಗೆ ಹಿಂದೂ ಧಾರ್ಮಿಕ ಪದ್ಧತಿಗಳ ಪ್ರಕಾರ 80 ವರ್ಷದ ಮುಸ್ಲಿಂ ಮಹಿಳೆಯ ಕೊನೆಯ ವಿಧಿಗಳನ್ನು ನೆರವೇರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಹಿಂದೆ, ಜಿಂದ್ ಜಿಲ್ಲೆಯ ಧನೋದಾ ಕಲನ್ ಗ್ರಾಮದಲ್ಲಿ ವಾಸಿಸುತ್ತಿದ್ದ ಆರು ಕುಟುಂಬಗಳ 35 ಸದಸ್ಯರು ತಮ್ಮ ಹಿರಿಯರೊಬ್ಬರ ಮರಣದ ನಂತರ ಹಿಂದೂ ಧರ್ಮಕ್ಕೆ ಮತಾಂತಗೊಳಿಸಲಾಗಿತ್ತು.