ಇರಾಕ್ ನಲ್ಲಿ 100 ನವಜಾತ ಶಿಶುಗಳಿಗೆ ನಸ್ರುಲ್ಲಾ ನಾಮಕರಣ

0
203

ಸನ್ಮಾರ್ಗ ವಾರ್ತೆ

ಇಸ್ರೇಲ್ ದಾಳಿಯಲ್ಲಿ ಹತರಾದ ಹಿಝ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಅವರು ಮಧ್ಯೇಶಿಯಾದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಅನ್ನೋದಕ್ಕೆ ಇರಾಕಿನಿಂದ ಬಂದ ಈ ಸುದ್ದಿ ಪುಷ್ಠಿ ನೀಡಿದೆ. ಇರಾಕಿನಲ್ಲಿ ನೂರಕ್ಕಿಂತಲೂ ಅಧಿಕ ನವಜಾತ ಶಿಶುಗಳಿಗೆ ನಸ್ರುಲ್ಲಾ ಎಂದು ನಾಮಕರಣ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ನಸ್ರುಲ್ಲಾ ಅವರ ಮೇಲಿನ ಅಭಿಮಾನವೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗಿದೆ. ದೇಶದಲ್ಲಿ ಒಟ್ಟು ನೂರರಷ್ಟು ನವಜಾತ ಶಿಶುಗಳಿಗೆ ನಸ್ರುಲ್ಲಾ ಎಂಬ ನಾಮಕರಣ ಮಾಡಲಾಗಿದೆ ಎಂದು ಇರಾಕ್ ನ ಆರೋಗ್ಯ ಸಚಿವರೇ ಹೇಳಿದ್ದಾರೆ.

ಕಳೆದ ಮೂರು ದಶಕಗಳಿಂದ ಹಸನ್ ನಸ್ರುಲ್ಲಾ ಹಿಝ್ಬುಲ್ಲಾಕ್ಕೆ ನೇತೃತ್ವವನ್ನು ನೀಡಿದ್ದರು. ಇಸ್ರೇಲ್ ನ ಅತಿಕ್ರಮಣವನ್ನು ಅತ್ಯಂತ ಯಶಸ್ವಿಯಾಗಿ ಇವರ ನೇತೃತ್ವದ ಹಿಝ್ಬುಲ್ಲಾ ತಡೆಯನ್ನು ಒಡ್ಡಿತ್ತು. ಇಸ್ರೇಲ್ ನೊಂದಿಗೆ ಹಲವು ಬಾರಿ ಮುಖಾಮುಖಿ ಸಮರಕ್ಕೆ ಹಿಝ್ಬುಲ್ಲಾ ಇಳಿದಿದೆ ಮತ್ತು ಎಲ್ಲ ಸಂದರ್ಭಗಳಲ್ಲಿಯೂ ಇಸ್ರೇಲ್ ಗೆ ವ್ಯಾಪಕ ಹಾನಿ ಉಂಟು ಮಾಡುವಲ್ಲಿ ಯಶಸ್ವಿಯಾಗಿದೆ.