ಗುರುವಾರದಿಂದ ನವರಾತ್ರಿ ಆರಂಭ; ಶಾಲೆಗಳಿಗೆ 17 ದಿನ ದಸರಾ ರಜೆ

0
144

ಸನ್ಮಾರ್ಗ ವಾರ್ತೆ

ಗುರುವಾರದಿಂದ (ಅಕ್ಟೋಬರ್ 3) ರಾಜ್ಯದ ಎಲ್ಲ ಶಾಲಾಗಳಿಗೆ ದಸರಾ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಕ್ಟೋಬರ್ 20ರವರೆಗೆ ಅಂದರೆ, 17 ದಿನಗಳ ಕಾಲ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ದಸರಾ ರಜೆ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.”2024- 25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಇರಲಿದೆ. ಅಕ್ಟೋಬ‌ರ್ 21ರಿಂದ ತರಗತಿಗಳು ಪುನರಾರಂಭವಾಗಲಿವೆ ಎಂದೂ ವಿವರಿಸಿದೆ.

ಅಕ್ಟೋಬ‌ರ್ 3ರಿಂದ ನವರಾತ್ರಿ ಆರಂಭವಾಗಲಿದ್ದು, ಅಕ್ಟೋಬ‌ರ್ 12ರಂದು ವಿಜಯದಶಮಿ ನಡೆಯಲಿದೆ. ಮೈಸೂರು, ಕೊಡಗು, ಮಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ದಸರಾ ಆಚರಣೆ ನಡೆಯಲಿದೆ. ಇದೇ ಅವಧಿಯಲ್ಲಿ ಪ್ರತಿ ವರ್ಷ ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ.