ನವರಾತ್ರಿ ಹಬ್ಬ; ಅಯೋಧ್ಯೆಯಲ್ಲಿ ಮಾಂಸದ ಅಂಗಡಿ ಮುಚ್ಚಲು ಆದೇಶ

0
165

ಸನ್ಮಾರ್ಗ ವಾರ್ತೆ

ಅಯೋಧ್ಯೆ: ನವರಾತ್ರಿ ಹಬ್ಬದ ಅವಧಿಯಲ್ಲಿ, ಅಕ್ಟೋಬರ್ 3 ರಿಂದ ಅಕ್ಟೋಬರ್ 11 ರವರೆಗೆ, ಜಿಲ್ಲೆಯ ಎಲ್ಲಾ ಕೋಳಿ ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಅಯೋಧ್ಯಾ ಆಡಳಿತ ಆದೇಶಿಸಿದೆ.

ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾಧಿಕಾರಿಯ ಸಹಾಯಕ ಆಯುಕ್ತರು ಹೊರಡಿಸಿದ ಈ ಆದೇಶವು ಒಂಬತ್ತು ದಿನಗಳ ಹಬ್ಬ ಹಿನ್ನೆಲೆಯಲ್ಲಿ ಹಬ್ಬದ ಗೌರವವನ್ನು ಮುಂದಿಟ್ಟು ನೀಡಲಾಗಿದೆ..

ನಿರ್ದೇಶನದ ಪ್ರಕಾರ, “ಆಡು/ಕೋಳಿ/ಮೀನು ಹೀಗೆ ಎಲ್ಲಾ ಮಾಂಸ ಅಂಗಡಿಗಳು ಅಯೋಧ್ಯೆ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಮುಚ್ಚಲ್ಪಡುತ್ತವೆ.” ಈ ಅವಧಿಯಲ್ಲಿ ಮಾಂಸ ಉತ್ಪನ್ನಗಳ ಮಾರಾಟ ಅಥವಾ ಸಂಗ್ರಹಣೆ ನಡೆದರೆ, ಸಾರ್ವಜನಿಕರು ಆಹಾರ ಸುರಕ್ಷತಾ ಇಲಾಖೆ ನೀಡಿದ 05278366607 ನಂಬರ್ ಮೂಲಕ ದೂರು ನೀಡಲು ಕೋರಲಾಗಿದೆ.

ಈ ಆದೇಶವನ್ನು ಪಾಲಿಸದಿದ್ದರೆ, 2006 ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ತಪ್ಪಿತಸ್ಥ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಹಿಂದು ದೇವತೆ ದುರ್ಗಾ ಮತ್ತು ದೇವತೆಯ ಒಂಬತ್ತು ರೂಪಗಳನ್ನು ಪೂಜಿಸುವ ನವರಾತ್ರಿ ಹಬ್ಬವನ್ನು ದೇಶಾದ್ಯಾಂತ ಭಕ್ತಿಯಿಂದ ಆಚರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಪಂಡಾಲುಗಳ ಅಲಂಕಾರ, ಸಾಂಪ್ರದಾಯಿಕ ಮತ್ತು ಜನಪದ ನೃತ್ಯಗಳು, ಜಾತ್ರೆಗಳನ್ನು ಒಳಗೊಂಡ ಹಲವು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಹಬ್ಬದ ಅಂಗವಾಗಿ ಅನೇಕ ಭಕ್ತರು ಉಪವಾಸವೂ ಆಚರಿಸುತ್ತಾರೆ.