ದೇವಾಲಯಗಳಲ್ಲಿ ಪುರುಷರ ಮೇಲೆ ಹೇರಲಾಗುತ್ತಿರುವ ಹಳೆಯ ವಸ್ತ್ರ ಪದ್ಧತಿಯನ್ನು ನಿಲ್ಲಿಸಿ: ಎನ್‌ಇಸಿಎಫ್

0
173

ಸನ್ಮಾರ್ಗ ವಾರ್ತೆ

ಮಂಗಳೂರು: ದೇವಾಲಯಗಳಲ್ಲಿ ಹಳೆಯ ಕಾಲದಿಂದಲೂ ಪಾಲಿಸುತ್ತಾ ಬಂದಿರುವ ಪುರುಷರು ಅಂಗಿ, ಬನಿಯನ್ ತೆಗೆದು ದೇವರ ದರ್ಶನ ಮಾಡುವ ಪದ್ಧತಿಗೆ ಆಕ್ಷೇಪ ವ್ಯಕ್ತವಾಗಿದ್ದು, ಈ ಕುರಿತ ಆದೇಶಿಸುವ ಫಲಕಗಳನ್ನು ದೇವಸ್ಥಾನಗಳಿಂದ ತೆರವುಗೊಳಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮನವಿ ಮಾಡಿದೆ.

ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ಮನವಿ ಸಲ್ಲಿಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯದ ವಿರುದ್ಧ ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಇಂತಹ ಪದ್ದತಿ ಇಲ್ಲ, ದಿವ್ಯಾಂಗರು ಬಟ್ಟೆ ಕಳಚಿ ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಚರ್ಮರೋಗವಿದ್ದವರು ಅಂಗಿ ಕಳಚಿದರೆ ಚರ್ಮರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ. ಇದು ಸಂವಿಧಾನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಕೂಡಲೇ ದೇವಾಲಯಗಳಲ್ಲಿ ಅಂಗಿ/ಬನಿಯನ್ ತೆಗೆದು ದೇವರ ದರ್ಶನ ಮಾಡಬೇಕು ಎಂಬ ಸೂಚನಾ ಫಲಕ ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದ್ದು, ಈ ಕುರಿತು 15 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚನೆ ನೀಡಲಾಗಿದೆ.