ನೆಹರೂ ತನ್ನ ಕೆಲಸಗಳಿಂದ ಪರಚಿತರು- ರಾಹುಲ್ ಗಾಂಧಿ

0
158

ಸನ್ಮಾರ್ಗ ವಾರ್ತೆ

ನವದೆಹಲಿ: ನೆಹರೂ ಮೆಮೊರಿಯಲ್ ಮ್ಯೂಸಿಯಂ ಆಂಡ್ ಲೈಬ್ರರಿಯ ಹೆಸರನ್ನು ಕೇಂದ್ರ ಸರಕಾರ ಬದಲಿಸಿದುದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಜವಾಹರಲಾಲ್ ನೆಹರೂ ತನ್ನ ಹೆಸರಿನಿಂದ ಮಾತ್ರ ಪರಿಚಿತರಾಗಿದ್ದಲ್ಲ ಅವರ ಕೆಲಸಗಳಿಂದ ಪರಿಚಿತರು ಎಂದು ರಾಹುಲ್ ಗಾಂಧಿ ಹೇಳಿದರು

ಹೊಸದಿಲ್ಲಿಯ ನೆಹರೂ ಮೆಮೊರಿಯಲ್ ಮ್ಯೂಸಿಯಂನ ಹೆಸರನ್ನು ಪ್ರೈಂ ಮಿನಿಸ್ಟರ್ ಮ್ಯೂಸಿಯಂ ಆಂಡ್ ಲೈಬ್ರರಿ ಸೊಸೈಟಿ ಎಂದು ಕೇಂದ್ರ ಸರಕಾರ ಬದಲಿಸಿದೆ. 77ನೇ ಸ್ವಾತಂತ್ರ್ಯ ದಿನದಲ್ಲಿ ಹೊಸ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದ್ದು ನರೇಂದ್ರ ಮೋದಿ ನೆಹರೂ ಪರಂಪರೆಯನ್ನು ತಿರುಚಿ ನಾಶಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪಿಸಿತ್ತು.

ಜೂನ್‌ನಲ್ಲಿ ಎನ್‌ಎಂಎಂಎಲ್ ಸೊಸೈಟಿಯ ವಿಶೇಷ ಸಭೆಯಲ್ಲಿ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಯಿತು. ವಸ್ತುಸಂಗ್ರಹಾಲಯವು ದೇಶವನ್ನು ವಿವಿಧ ಸವಾಲುಗಳ ಮೂಲಕ ಮುನ್ನಡೆಸುವ ಮತ್ತು ಪ್ರಗತಿಯನ್ನು ಖಾತರಿಪಡಿಸುವ ಕಥೆಯನ್ನು ಹೇಳುತ್ತದೆ.

ನಾವು ಎಲ್ಲ ಪ್ರಧಾನಿಗಳನ್ನು ಒಪ್ಪಿಕೊಳ್ಳುತ್ತೇವೆ. ಇದು ಸಾಂಸ್ಥಿಕ ಸ್ಮರಣೆಯನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರತಿಕ್ರಿಯಿಸಿದೆ.