ನೆತನ್ಯಾಹು ಕ್ರಿಮಿನಲ್- ಕೊಲಂಬಿಯ ಅಧ್ಯಕ್ಷ ಪೆಟ್ರೋ

0
229

ಸನ್ಮಾರ್ಗ ವಾರ್ತೆ

ವಿಶ್ವಸಂಸ್ಥೆ: ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಾಜಾ ಪಟ್ಟಿಯ ಮೇಲಿನ ದಾಳಿಗೆ ಟೀಕಿಸಿದ್ದಾರೆ ಎಂದು ಅನಾಡೋಲು ಏಜೆನ್ಸಿ ವರದಿ ಮಾಡಿದೆ.

“ಈ ಅಸಮಾನತೆಯಲ್ಲಿಯೇ ಹವಾಮಾನ ಬಿಕ್ಕಟ್ಟಿನಿಂದ ಸಾಮೂಹಿಕ ನಾಶದ ಸ್ಥಿತಿಯಲ್ಲಿದ್ದೇವೆ. ಮತ್ತು ಗಾಜಾದ ಮೇಲೆ ನೆತನ್ಯಾಹು ಅವರಂತಹ ಅಪರಾಧಿಗಳು ಎಸೆಯುವ ಬಾಂಬ್‍ಗಳು ಇನ್ನಷ್ಟು ತೀವ್ರತೆಯನ್ನು ಸೃಷ್ಟಿಸುತ್ತಿದೆ ಎಂದು ಪೆಟ್ರೋ ಹೇಳಿದರು.

“ಗಾಝಾ ಸತ್ತಾಗ, ಎಲ್ಲಾ ಮಾನವೀಯತೆಯು ಸಾಯುತ್ತದೆ. ಇಂದು ನಾವು 20,000 ಮಕ್ಕಳನ್ನು ಕೊಂದಿದ್ದೇವೆ.
ವಿಶ್ವದ ಒಂದು ದೇಶದ ಅಧಿಕಾರವನ್ನು ಇನ್ನು ಮುಂದೆ ರಾಜಕೀಯ ಮತ್ತು ಆರ್ಥಿಕ ಶಕ್ತಿಯಿಂದ ಚಲಾಯಿಸಲಾಗುವುದಿಲ್ಲ, ಆದರೆ ಮಾನವೀಯತೆಯನ್ನು ನಾಶಪಡಿಸುವ ಮೂಲಕ. ಬದುಕನ್ನು ಉಳಿಸಿಕೊಳ್ಳುವ ಶಕ್ತಿ ಇರುವ ನಮ್ಮಂಥವರು ನಿರ್ಲಕ್ಷ್ಯದಿಂದ ಮಾತಾಡುತ್ತಿದ್ದೇವೆ. ಅದಕ್ಕಾಗಿಯೇ ಗಾಜಾದಲ್ಲಿ ನರಮೇಧವನ್ನು ನಿಲ್ಲಿಸಲು ವಿಶ್ವಸಂಸ್ಥೆಯಲ್ಲಿ ವೋಟು ಹಾಕಿದ್ದು, ಆದರೆ ಕೆಲವರು ನಮ್ಮ ಧ್ವನಿಯನ್ನು ಆಲಿಸಲು ಸಿದ್ಧರಿಲ್ಲ ಎಂದು ಪೆಟ್ರೋ ಹೇಳಿದರು. ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಕ್ಯೂಬಾ ಮತ್ತು ವೆನೆಜುವೆಲಾದ ದಿಗ್ಬಂಧನವನ್ನು ಸಹ ಪೆಟ್ರೋ ಖಂಡಿಸಿದರು.