70 ವರ್ಷದ ಹಿಂದೆ ಹಿಟ್ಲರ್‌ನನ್ನು ತಡೆದಂತೆ ನೆತನ್ಯಾಹು ಹತ್ಯೆ ಜಾಲವನ್ನು ತಡೆಯಬೇಕು – ಉರ್ದುಗಾನ್

0
212

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಟರ್ಕಿಯ ಅಧ್ಯಕ್ಷ ರಜಬ್ ತಯ್ಯಿಫ್ ಉರ್ದುಗಾನ್‍ರು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹುರ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದಾರೆ.

ಫೆಲೆಸ್ತೀನಿನ ಮಕ್ಕಳು, ಮಹಿಳೆಯರ ಕೊಲೆ ಮಾಡಿ ಫೆಲೆಸ್ತೀನನ್ನೇ ಮಹಾ ಶ್ಮಶಾನ ಮಾಡಿದ ನೆತನ್ಯಾಹುರ ಕೊಲೆ ಕೃತ್ಯದ ನೆಟ್‍ವರ್ಕನ್ನು ತಡೆಯಬೇಕೆಂದು ಅವರು ಹೇಳಿದರು.

ಗಾಝದಲ್ಲಿ ಮಕ್ಕಳು ಮಾತ್ರ ಸಾಯುತ್ತಿಲ್ಲ. ವಿಶ್ವಸಂಸ್ಥೆಯ ವ್ಯವಸ್ಥೆ ಕೂಡ ಅಲ್ಲಿ ಇಲ್ಲದಾಗುತ್ತಿದೆ. ಪಾಶ್ಚಾತ್ಯ ಜಗತ್ತು ರಕ್ಷಿಸುತ್ತಿರುವ ಮೌಲ್ಯಗಳನ್ನು ಬೆಂಜಮಿನ್ ನೆತನ್ಯಾಹು ನಾಶಪಡಿಸುತ್ತಿದ್ದಾರೆ. ಗಾಝಾ ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವವರು ಮನುಷ್ಯರಲ್ಲವೇ? ಫೆಲೆಸ್ತೀನಿನ ಮಕ್ಕಳಿಗೆ ಯಾವುದೇ ಹಕ್ಕುಗಳಿಲ್ಲವೇ? ಎಂದು ಉರ್ದುಗಾನ್ ಪ್ರಶ್ನಿಸಿದರು.

ನೆತನ್ಯಾಹು ಮಧ್ಯಪ್ರಾಚ್ಯವನ್ನು ಯುದ್ಧಕ್ಕೆ ದೂಡಿ ಹಾಕುತ್ತಿದ್ದಾರೆ. ನೆತನ್ಯಾಹು ಮತ್ತು ಆತನ ಕೊಲೆಪಾತಕ ತಂಡವನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬರಬೇಕು. 70 ವರ್ಷದ ಹಿಂದೆ ಹಿಟ್ಲರ್ ನನ್ನು ತಡೆಯಲು ಜಗತ್ತು ಮುಂದೆ ಬಂದಂತೆ ಇದು ಆಗಬೇಕು. ಅದಕ್ಕೆಂದು ಮಾನವೀಯ ಸಖ್ಯವೊಂದು ರೂಪಿಸಿಕೊಳ್ಳಬೇಕೆಂದರು. ಗಾಝದಲ್ಲಿ ಕದನ ವಿರಾಮ ಕೂಡಲೇ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದು ಇಸ್ರೇಲ್ ದಾಳಿಯಲ್ಲಿ ಇದುವರೆಗೆ 41467 ಮಂದಿ ಕೊಲ್ಲಲ್ಪಟ್ಟಿದ್ದಾರೆ.