ಸನ್ಮಾರ್ಗ ವಾರ್ತೆ
ಪ್ಯಾರಿಸ್: ಒಮಿಕ್ರಾನ್ ಬಳಿಕ ಕೊರೋನದ ಹೊಸ ರೂಪಾಂತರ ಇಹು(IHU) ಫ್ರಾನ್ಸ್ ನಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಕೊರೋನ ರೂಪಾಂತರ ಒಮಿಕ್ರಾನ್ ವ್ಯಾಪಿಸುವುದಕ್ಕಿಂತಲೂ ಬೇಗನೆ ಹರಡುವ ಶಕ್ತಿ ಹೊಸ ರೂಪಾಂತರ ಇಹು ಗಿದೆ ಎಂದು ಹೇಳಲಾಗಿದ್ದು, ಸದ್ಯ ಇಹು ಫ್ರಾನ್ಸಿನಲ್ಲಿ ದೃಢಪಟ್ಟಿದೆ. ದಕ್ಷಿಣ ಫ್ರಾನ್ಸಿನಲ್ಲಿ ಹನ್ನೆರಡು ಮಂದಿಗೆ ಹೊಸ ರೂಪಾಂತರ ತಗಲಿರುವುದಾಗಿ ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಫ್ರಿಕನ್ ದೇಶ ಕ್ಯಾಮರೂನಿಗೆ ಹೋಗಿ ಮರಳಿದ ವ್ಯಕ್ತಿಯಲ್ಲಿ ಮೊದಲು ಇಹು ಕಂಡುಬಂದಿತ್ತು. ನಂತರ ಅವರ ನಿಕಟ ಸಂಪರ್ಕದ ವ್ಯಕ್ತಿಗಳಿಗೆ ರೋಗ ಹರಡಿತ್ತು. ಇದು ಒಮಿಕ್ರಾನ್ಗಿಂತಲೂ ರಭಸದಿಂದ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ.
ಐಎಚ್ಯು ಇಹು ಮೆಟಿಟರಾನ್ ಇನ್ಫೆಕ್ಷನ್ ಎಂಬ ಸಂಸ್ಥೆಯ ವಿಜ್ಞಾನಿಗಳು ರೋಗವನ್ನು ಗುರುತಿಸಿದರು. ಆದುದರಿಂದ ಅದಕ್ಕೆ ಬಿ. 1.640.2 ಎಂಬ ಇಹು ಎಂದು ಹೆಸರು ಇಡಲಾಯಿತು. ದಕ್ಷಿಣ ಫ್ರಾನ್ಸಿನ ಮಾರ್ಸದಲ್ಲಿ ಇದು ಕಂಡು ಬಂದ ವುಹಾನಿನಿಂದ ಹರಡಿದ ಮೊದಲ ಕೊರೊನ ರೂಪಾಂತರಕ್ಕಿಂತ 46 ಬಾರಿ ರೂಪಾಂತರಗೊಂಡಿದೆ. ಹಲವು ಬಾರಿ ವ್ಯತ್ಯಾಸ ಆಗಿದ್ದರಿಂದ ಈ ವೈರಸ್ಗೆ ವ್ಯಾಕ್ಸಿನ್ಗಳನ್ನು ಪ್ರತಿರೋಧಿಸುವ ಶಕ್ತಿ ಸಿಕ್ಕಿರುವ ಸಾಧ್ಯತೆ ಹೆಚ್ಚಿದೆ.
ಇಹು ರೂಪಾಂತರದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತದೋ ಎಂದು ಸಂಶೋಧನೆ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಘಟನೆ ಅಂಗೀಕರಿಸುವವರೆಗೆ ಹೊಸ ರೋಗ ಇಹು ಎಂಬ ಹೆಸರಿನಲ್ಲಿ ಪರಿಚಯವಾಗಲಿದೆ.












