ಹೊಸ ಕ್ರಿಮಿನಲ್ ಕಾನೂನುಗಳು ಸಂವಿಧಾನದ ಅಪಹಾಸ್ಯ, ಸಮಾಲೋಚನೆಯಿಲ್ಲದೆ ಜಾರಿಗೊಳಿಸಲಾಗಿದೆ: ತೀಸ್ತಾ ಸೆಟಲ್ವಾಡ್

0
179

ಸನ್ಮಾರ್ಗ ವಾರ್ತೆ

ಮುಂಬೈ: ಜುಲೈ 1 ರಿಂದ ರಾಷ್ಟ್ರವ್ಯಾಪಿ ಬ್ರಿಟಿಷರ ಕಾಲದ ಮೂರು ಹೊಸ ಕಾನೂನುಗಳು ಮತ್ತೆ ಜಾರಿಯಾಗುತ್ತಿದ್ದು, ಇದು “ಭಾರತೀಯ ಸಂವಿಧಾನದ ಅಪಹಾಸ್ಯ” ಎಂದು ನಾಗರಿಕ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ಟೀಕಿಸಿದ್ದಾರೆ.

ಜುಲೈ 1 ರಿಂದ ಜಾರಿಗೆ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ 2023 ಹೀಗೆ ಹೊಸ ಕಾನೂನುಗಳನ್ನು ಎನ್‍ಡಿಎ ಸರಕಾರ ಜಾರಿಗೊಳಿಸುತ್ತಿದೆ.

ಕ್ರಮವಾಗಿ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯಿದೆಯನ್ನು ಸರಕಾರ ಬದಲಿಸುತ್ತಿದೆ.

“ಈ ಕಾನೂನುಗಳು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಾರ್ವಭೌಮತ್ವವನ್ನು ಅಪಹಾಸ್ಯ ಮಾಡುತ್ತಿವೆ ಈ ಕಾನೂನುಗಳನ್ನು ಅಂಗೀಕರಿಸುವ ಮೊದಲು ವಿವರವಾದ ಮತ್ತು ವಿಸ್ತೃತವಾದ ಚರ್ಚೆಯನ್ನು ಸರಕಾರ ನಡೆಸಬೇಕಿತ್ತು . ಆದರೆ ಅದು ಸಂಭವಿಸಲಿಲ್ಲ” ಎಂದು ‘ಭಾರತದ ಹೊಸ ಅಪರಾಧ ಕಾನೂನುಗಳು ಸುಧಾರಣೆಯೇ ಅಥವಾ ದಮನವೇ ಎಂದು ಟೀಸ್ಟಾ ಸೆಟಲ್ವಾಡ್ ಪ್ರಶ್ನಿಸಿದ್ದಾರೆ.

ಮಾನವ ಹಕ್ಕುಗಳು ಮತ್ತು ಕಾನೂನು ಚಳುವಳಿಗಳ ತಿದ್ದುಪಡಿ ಮಾಡಲಾದ ಕಾನೂನಿನಲ್ಲಿ ಕೆಲವು ವಸಾಹತುಶಾಹಿ ಮಾದರಿಯನ್ನು ತರಲಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾನೂನುಗಳು ” ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ಪ್ರಜಾಸತ್ತಾತ್ಮಕ ರಚನೆಯ ವಿರುದ್ಧವಾಗಿದ್ದು “ಹಿಂದೂ ರಾಷ್ಟ್ರದತ್ತ ತ್ವರಿತಗೊಳಿಸುತ್ತಿದೆ” ಎಂದು ಸೆಟಲ್ವಾಡ್ ಪ್ರತಿಪಾದಿಸಿದರು.

ವೃಂದಾ ಗ್ರೋವರ್ ಮತ್ತು ವಿಜಯ್ ಹಿರೇಮಠ್ ಕೂಡ ಹೊಸ ಕಾನೂನುಗಳನ್ನು ವಿರೋಧಿಸಿದರು.

“ಅಸಾಧಾರಣ ನಿಬಂಧನೆಗಳ ವಾಡಿಕೆಯ” ಅಪಾಯವನ್ನು ಒತ್ತಿ ಹೇಳಿದ ಗ್ರೋವರ್ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯಲ್ಲಿ ಇದ್ದ ಕೆಲವು ಸುರಕ್ಷೆಗಳು ಇನ್ನು ಇಲ್ಲ. ಹೊಸ ಕಾನೂನುಗಳು ಈಗಿರುವ ಕಾನೂನುಗಳಿಗಿಂತ ಹೆಚ್ಚು ಕಠಿಣವಾಗಿವೆ ಎಂದು ಹಿರೇಮಠ ಹೇಳಿದ್ದಾರೆ.