ಬೀಜಿಂಗ್ ಒಲಿಂಪಿಕ್ಸ್‌ಗೆ ಬಹಿಷ್ಕಾರ ಘೋಷಿಸಿದ ನ್ಯೂಝಿಲೆಂಡ್

0
279

ಸನ್ಮಾರ್ಗ ವಾರ್ತೆ

ವೆಲ್ಲಿಂಗ್‍ಟನ್: ನ್ಯೂಝಿಲೆಂಡ್ ಬೀಜಿಂಗ್‌ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ನಿಂದ ರಾಜತಾಂತ್ರಿಕ ಬಹಿಷ್ಕಾರವನ್ನು ಘೋಷಿಸಿದೆ. ಚೀನಕ್ಕೆ ರಾಜತಾಂತ್ರಿಕ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದೆ. ಉಪಪ್ರಧಾನಿ ಗ್ರಾಂಡ್ ರಾಬರ್ಟ್ ಸನ್ ರಾಜತಾಂತ್ರಿಕ ಬಹಿಷ್ಕಾರದ ಕುರಿತು ತಿಳಿಸಿದ್ದು, ಕೊರೋನ ಹಿನ್ನೆಲೆಯಿಂದ ಬಹಿಷ್ಕರಿಸಲಾಗುತ್ತಿದೆ ಎಂದು ಹೇಳಿದರು.

ಸಚಿವ ಮಟ್ಟದವರನ್ನು ಒಲಿಂಪಿಕ್ಸ್‍ಗೆ ಕಳುಹಿಸುವುದಿಲ್ಲ ಮೊದಲೇ ನ್ಯೂಝಿಲೆಂಡ್ ಸ್ಪಷ್ಟಪಡಿಸಿತ್ತು. ನಾವು ರಾಜತಾಂತ್ರಿಕರನ್ನು ಕಳುಹಿಸಿದ್ದಕ್ಕೂ ಅಮೆರಿಕದ ಬಹಿಷ್ಕಾರಕ್ಕೂ ಸಂಬಂಧವಿಲ್ಲ, ಒಲಿಂಪಿಕ್ಸ್ ಬಹಿಷ್ಕಾರಕ್ಕೆ ನಾನಾ ಕಾರಣಗಳಿದ್ದು ಅದರಲ್ಲಿ ಒಂದು ಕೊರೋನವಾಗಿದೆ. ಅಲ್ಲಿಗೆ ಪ್ರತಿನಿಧಿಗಳನ್ನು ಕಳುಹಿಸಿಕೊಡುವಂತಹ ಪರಿಸ್ಥಿತಿ ಈಗ ಅಲ್ಲಿಲ್ಲ. ಚೀನಕ್ಕೆ ಈ ವಿಷಯವನ್ನು ಅಕ್ಟೋಬರಿನಲ್ಲಿಯೇ ಹೇಳಿದ್ದೇವೆ ಎಂದು ಉಪ ಪ್ರಧಾನಿ ಹೇಳಿದರು.

ಚೀನದಲ್ಲಿ ಮಾನವಹಕ್ಕು ಉಲ್ಲಂಘನೆಗೆ ಈಗಾಗಲೇ ನ್ಯೂಝಿಲೆಂಡ್ ಪ್ರತಿಭಟನೆ ವ್ಯಕ್ತಪಡಿಸಿತ್ತು. ಉಯಿಘುರ್ ಮುಸ್ಲಿಮರ ಮೇಲಾಗುತ್ತಿರುವ ಮಾನವಹಕ್ಕುಗಳ ಉಲಂಘನೆಯನ್ನು ಪ್ರತಿಭಟಿಸಿ 2022ರ ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕರಿಸುವುದಾಗಿ ಅಮೆರಿಕ ಘೋಷಿಸಿದ್ದು, ಅಮೆರಿಕ ರಾಜತಾಂತ್ರಿಕ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದಿದೆ‌.