ಬಿಜೆಪಿ ಮುಖಂಡನ ಮನೆ ಮುಂದೆ ಸೆಗಣಿ ಎಸೆದ ರೈತರಿಂದ ಕೊಲೆ ಯತ್ನ ನಡೆದಿಲ್ಲ: ಪಂಜಾಬ್ ಸಿಎಂ

0
687

ಸನ್ಮಾರ್ಗ ವಾರ್ತೆ

ಪಂಜಾಬ್: ಕೇಂದ್ರ ಕೃಷಿ ಕಾನೂನುಗಳ ವಿರುದ್ದ ಪ್ರತಿಭಟನಾನಿರತರಾದ ರೈತರು ಬಿಜೆಪಿ ಮುಖಂಡರ ಮನೆಯ ಹೊರಗೆ ಗೋವಿನ ಸೆಗಣಿ ಎಸೆದ ಘಟನೆಗೆ ಸಂಬಂಧಿಸಿ ದಾಖಲಿಸಲಾಗಿದ್ದ ಕೊಲೆ ಪ್ರಕರಣವನ್ನು ಹಿಂಪಡೆಯುವಂತೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ.

ಅಲ್ಲದೇ, ರೈತರು ಅತಿರೇಕಕ್ಕೆ ಹೋಗಿದ್ದಾರೆಂದು ಹೇಳಿ ಪ್ರಕರಣ ದಾಖಲಿಸಿದ್ದ ಎಸ್‌ಎಚ್‌ಒ ಅವರನ್ನು ವರ್ಗಾಯಿಸಲು ಸಿಎಂ ಆದೇಶಿಸಿದ್ದಾರೆ. ಪ್ರತಿಭಟನಾಕಾರರು ಮಾಜಿ ಪಂಜಾಬ್ ಸಚಿವ ತಿಕ್ಷನ್ ಸುಡ್ ಅವರ ಮನೆಯ ಮುಂದೆ ಒಂದು ಟ್ರ್ಯಾಕ್ಟರ್ ಗೋವಿನ ಸೆಗಣಿಯನ್ನು ತಂದು ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು.