ನೀರು ಕುಡಿಯುವಂತೆಯೂ ಇಲ್ಲ, ಮೂತ್ರ ವಿಸರ್ಜನೆಗೆ ಹೋಗುವಂತೆಯೂ ಇಲ್ಲ: ಇದು ಅಮೆಜಾನ್ ಸಂಸ್ಥೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ರೀತಿ

0
189

ಸನ್ಮಾರ್ಗ ವಾರ್ತೆ

ಹರಿಯಾಣದ ಮನೇಸರ್ ನಲ್ಲಿರುವ ಅಮೆಜಾನ್ ವೇರ್ ಹೌಸಿನ ಉದ್ಯೋಗಸ್ಥರಿಗೆ ಕಂಪೆನಿ ವಿಚಿತ್ರ ಮತ್ತು ಆಘಾತಕಾರಿ ಶರತ್ತುಗಳನ್ನು ವಿಧಿಸಿರುವ ಬಗ್ಗೆ ವರದಿಯಾಗಿದೆ.

ಕಂಪನಿಯ ಟಾರ್ಗೆಟ್ ಪೂರ್ತಿಯಾಗುವವರೆಗೆ ನೀರು ಕುಡಿಯುವುದೋ, ಮೂತ್ರ ವಿಸರ್ಜನೆಗಾಗಿ ಹೋಗುವುದೋ ಮಾಡಬಾರದು ಎಂಬ ಪ್ರತಿಜ್ಞೆಯನ್ನು ಉದ್ಯೋಗಿಗಳಿಂದ ಕಂಪೆನಿ ಪಡಕೊಂಡಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ದೊಡ್ಡ ದೊಡ್ಡ ಟ್ರಕ್ ಗಳಿಂದ ಪಾರ್ಸೆಲ್ ಗಳನ್ನು ಪೂರ್ಣವಾಗಿ ಅನ್ ಲೋಡ್ ಮಾಡುವುದಕ್ಕಿಂತ ಮೊದಲು ಯಾವುದೇ ವಿರಾಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿರುವುದಾಗಿ 24 ವರ್ಷದ ಕಾರ್ಮಿಕ ಇಂಡಿಯನ್ ಎಕ್ಸ್ಪ್ರೆಸ್ ನ ಜೊತೆ ಹೇಳಿದ್ದಾನೆ.

ಬಿಸಿಲು 50 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ ಸಂದರ್ಭದಲ್ಲಿ ನೀರು ಕುಡಿಯಲೂ ಬಿಡದೆ ಇಷ್ಟು ಕ್ರೂರವಾಗಿ ನಡೆಸಿಕೊಂಡಿದ್ದಾರೆ ಎಂದು ಆ ಕಾರ್ಮಿಕ ಹೇಳಿದ್ದಾನೆ.

ವಾರದಲ್ಲಿ ಐದು ದಿವಸಗಳ ಕಾಲ ತಲಾ 10 ಗಂಟೆಯ ಕೆಲಸ ಇರುತ್ತದೆ. ಪ್ರತಿ ತಿಂಗಳು ಈ ಕಾರ್ಮಿಕರಿಗೆ ರೂ.10,088 ರೂಪಾಯಿ ವೇತನ ಸಿಗುತ್ತದೆ. ಮಧ್ಯಾಹ್ನ 30 ನಿಮಿಷಗಳ ಕಾಲ ವಿರಾಮ ಸಿಗುತ್ತೆ, ಇದರಲ್ಲಿ ಊಟ ಮತ್ತು ಇನ್ನಿತರ ಎಲ್ಲವನ್ನೂ ಮುಗಿಸಬೇಕಾಗಿದೆ. ಎಷ್ಟೇ ವಿರಾಮವಿಲ್ಲದೆ ಕೆಲಸ ಮಾಡಿದರೂ ಒಂದು ದಿನದಲ್ಲಿ ನಾಲ್ಕು ಟ್ರಕುಗಳ ಹೊರತಾಗಿ ಹೆಚ್ಚುವರಿ ಅನ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕಾರ್ಮಿಕ ಹೇಳಿದ್ದಾನೆ.