ಗೋಡ್ಸೆಯಲ್ಲಿ ವಿಶ್ವಾಸ ಇಲ್ಲ: ಗಾಂಧೀಜಿಯ ಹಿಂದೂ ಧರ್ಮದಲ್ಲಿ ನಮಗೆ ನಂಬಿಕೆ ಇದೆ- ಕೆ.ಸಿ. ವೇಣುಗೋಪಾಲ್

0
179

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜೂ.3: ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾಡಿದ ಭಾಷಣದ ಹೆಜ್ಜೆಯನ್ನು ಅನುಸರಿಸಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ.

ನಮ್ಮದು ಗೋಡ್ಸೆಯಲ್ಲಿ ನಂಬಿಕೆ ಇಟ್ಟವರ ಪಕ್ಷ ಅಲ್ಲ. ನಾವು ಗಾಂಧೀಜಿಯ ಹಿಂದೂ ಧರ್ಮದಲ್ಲಿ ವಿಶ್ವಾಸ ಇಟ್ಟಿದ್ದೇವೆ ಎಂದು ಕೆಸಿ ವೇಣುಗೋಪಾಲ್ ಹೇಳಿದರು.

ಚುನಾವಣೆಯ ವ್ಯವಸ್ಥೆಯ ದುರುಪಯೋಗ ಇಲ್ಲದಿರುತ್ತಿದ್ದರೆ ಬಿಜೆಪಿ 150 ಸೀಟಿಗಿಂತ ಹೆಚ್ಚು ಗೆಲ್ಲುತ್ತಿರಲಿಲ್ಲ. ಚುನಾವಣೆಯಲ್ಲಿ ನೈತಿಕ ಗೆಲುವು ಇಂಡಿಯ ಕೂಟಕ್ಕೆ ಸಿಕ್ಕಿದೆ ಎಂದು ಕೆಸಿ ವೇಣುಗೋಪಾಲ್ ಹೇಳಿದರು.

ಬಿಜೆಪಿ ಭ್ರಷ್ಟಾಚಾರವನ್ನು ಶುದ್ಧೀಕರಿಸುವ ವಾಷಿಂಗ್ ಮೆಶಿನ್ ಮಾತ್ರವಾಗಿದೆ ಎಂದು ವೇಣುಗೋಪಾಲ್ ವ್ಯಂಗ್ಯ ಮಾಡಿದರು. ರಾಷ್ಟ್ರಪತಿಯವರ ಭಾಷಣವನ್ನು ಉದ್ಧರಿಸಿದ ಅವರು ಸರಕಾರವನ್ನು ಕಟು ಭಾಷೆಯಲ್ಲಿ ಟೀಕಿಸಿದರು. ಜನರನ್ನು ವಿಭಜಿಸಲು ಬಿಜೆಪಿ ಧರ್ಮವನ್ನು ಆಯುಧ ಮಾಡಿಕೊಂಡಿದೆ ಎಂದು ಅವರು ಹೇಳಿದರು.

ಪ್ರಧಾನಿ ಎಷ್ಟು ದ್ವೇಷ ಭಾಷಣ ಮಾಡಿದರು. ಧಾರ್ಮಿಕ ಧ್ರುವೀಕರಣಕ್ಕೆ ಶ್ರಮಿಸಿದರೂ ಜನರು ಅವೆಲ್ಲವನ್ನು ತಿರಸ್ಕರಿಸಿದ್ದಾರೆ. ಮೋದಿ ದ್ವೇಷ ಭಾಷಣ ಮಾಡಿದ ಭನ್ಸ್ವಾರದಲ್ಲಿ ಇಂಡಿಯ ಸಖ್ಯದ ಪ್ರತಿನಿಧಿ 2,47,504 ವೋಟುಗಳ ಬಹುಮತದಿಂದ ಗೆದ್ದಿದೆ. ಮೋದಿಯನ್ನು ದೇವನಿಗಿಂತಲೂ ದೊಡ್ಡವನಾಗಿ ಚಿತ್ರಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರು ಎಂದು ವೇಣುಗೊಪಾಲ್ ಹೇಳಿದರು.