ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಇನ್ನು ಇಸ್ರೇಲ್ ಮತ್ತು ಯಹೂದಿಗಳನ್ನು ವಿಮರ್ಶಿಸುವಂತಿಲ್ಲ: ಮೇಟ

0
167

ಸನ್ಮಾರ್ಗ ವಾರ್ತೆ

ಝಿಯೋನಿಸಮ್ ಅನ್ನು ವಿಮರ್ಶಿಸುವ ಬಗ್ಗೆ ತನ್ನ ನಿಲುವನ್ನು ಫೇಸ್ ಬುಕ್ ಇನ್ಸ್ಟಾಗ್ರಾಮ್ ನ ಮಾತೃ ಸಂಸ್ಥೆಯಾಗಿರುವ ಮೆಟ ಕಂಪೆನಿ ಸ್ಪಷ್ಟಪಡಿಸಿದೆ.

ಝಿಯೋನಿಷ್ಟ್ ಗಳನ್ನು ಗುರಿಯಾಗಿಸಿ ಇನ್ನು ಮುಂದೆ ಹಾಕಲಾಗುವ ಎಲ್ಲ ಪೋಸ್ಟುಗಳನ್ನೂ ತಡೆಯುವುದಾಗಿ ಮೆಟ ಕಂಪನಿ ಹೇಳಿದೆ.

ಝಿಯೋನಿಷ್ಟ್ ಗಳನ್ನು ವಿರೋಧಿಸುತ್ತಿದ್ದೇವೆ ಎಂಬ ನೆಪದಲ್ಲಿ ಯಹೂದಿಯರನ್ನು ಮತ್ತು ಇಸ್ರೇಲಿಗಳ ವಿರುದ್ಧ ಹರಿಹಾಯುದಕ್ಕೆ ಇನ್ನು ಮುಂದೆ ಅವಕಾಶ ನೀಡಲ್ಲ ಎಂದು ಮೆಟಾ ಹೇಳಿದೆ. ಝಿಯೋನಿಷ್ಟ್ ಎಂಬ ಪದ ಪ್ರಯೋಗಿಸಿ ಆಕ್ಷೇಪಾರ್ಹವಾದ ಪೋಸ್ಟುಗಳನ್ನು ಇನ್ನು ಮುಂದೆ ತೆರವುಗೊಳಿಸುವುದಾಗಿ ಮೆಟಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಯಹೂದ್ಯರು ಮತ್ತು ಇಸ್ರಾಯಿಲಿಗಳನ್ನು ಕ್ರೂರಿಗಳಂತೆ ಬಿಂಬಿಸುವುದು, ಅವರ ವಿರುದ್ಧ ಆಕ್ರಮಣಕ್ಕೆ ಕರೆ ನೀಡುವುದು ಮತ್ತು ಅವರ ಅಸ್ತಿತ್ವವನ್ನು ನಿರಾಕರಿಸುವ ರೀತಿಯ ಪೋಸ್ಟುಗಳಿಗೆ ಇನ್ನು ಮುಂದೆ ಅವಕಾಶ ಇಲ್ಲ ಎಂದು ಮೆಟಾ ಹೇಳಿದೆ.

ಫೇಸ್ಬುಕ್, ಇನ್ಸ್ಟಾಗ್ರಾಮ್, ಥ್ರೆಡ್ ಮುಂತಾದ ಮೆಟದ ಸೋಶಿಯಲ್ ಮೀಡಿಯಾ ಫ್ಲ್ಯಾಟ್ ಫಾರ್ಮುಗಳಲ್ಲಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.