ದೇವಸ್ಥಾನದ ಧ್ವನಿವರ್ಧಕದಿಂದ ಯಾರಿಗೂ ಸಮಸ್ಯೆ ಇಲ್ಲ; IAS ಅಧಿಕಾರಿಯ ಹೇಳಿಕೆಗೆ ಆಕ್ರೋಶ

0
149

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶ ; ದೇವಸ್ಥಾನಗಳಲ್ಲಿ ರಾತ್ರಿಯಿಡೀ ಧ್ವನಿವರ್ಧಕಗಳ ಬಳಕೆಯನ್ನು ಟೀಕಿಸಿ ಹಿರಿಯ ಐಎಎಸ್ ಅಧಿಕಾರಿ ಶೈಲಬಾಲಾ ಮಾರ್ಟಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದ್ದು, ಅವರ ಹೇಳಿಕೆಗೆ ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ.

ಸಾರ್ವಜನಿಕ ವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕ ಬಳಕೆ ಮತ್ತು ಭೋಪಾಲಿನಲ್ಲಿ ದುರ್ಗಾ ವಿಗ್ರಹ ವಿಸರ್ಜನೆಯ ವೇಳೆ 13 ವರ್ಷದ ಹುಡುಗ ಡಿಜೆ ಸಂಗೀತಕ್ಕೆ ಕುಣಿಯುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವಿಗೀಡಾದ ಘಟನೆ ಚರ್ಚೆಯ ಭಾಗವಾಗಿ ಅವರು ಈ ಪೋಸ್ಟ್ ಹಾಕಿದ್ದರು.

“ದೇವಸ್ಥಾನಗಳಲ್ಲಿ ಅಳವಡಿಸಿದ ಧ್ವನಿವರ್ಧಕಗಳಿಂದ ಮಧ್ಯರಾತ್ರಿವರೆಗೆ ಸೌಂಡ್ ಸಿಸ್ಟಮ್‌ಗಳ ಮೂಲಕ ಶಬ್ದ ಮಾಲಿನ್ಯವಾಗುತ್ತಿದೆ, ಅನೇಕ ಬೀದಿಗಳಲ್ಲಿ ಧ್ವನಿ ವ್ಯಾಪಿಸಿದರೂ, ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ” ಎಂದು ಅಧಿಕಾರಿ ಎಕ್ಸ್ ಪೋಸ್ಟ್ ಮಾಡಿದ್ದರು.

ಮಾರ್ಟಿನ್ ಅವರ ಪೋಸ್ಟ್ ಬಲಪಂಥೀಯ ಸಂಘಟನೆಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದ್ದು, ‘ಸಂಸ್ಕೃತಿ ಬಚಾವೋ ಮಂಚ್’ದ ಮುಖ್ಯಸ್ಥ ಚಂದ್ರಶೇಖರ್ ತಿವಾರಿ ಅವರು ಆಕ್ರೋಶ ವ್ಯಕ್ತಪಡಿಸುತ್ತಾ, ಐಎಎಸ್ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಮಾತ್ರವಲ್ಲ ಅವರ ಹೇಳಿಕೆಯಲ್ಲಿ ಪಕ್ಷಪಾತವಿದೆ ಎಂದು ಆರೋಪಿಸಿದ್ದಾರೆ.

“ಸಾರ್ವಜನಿಕ ವ್ಯವಸ್ಥೆ ಮತ್ತು ಧ್ವನಿವರ್ಧಕಗಳ ಕುರಿತು ಬಿಜೆಪಿ ಸರ್ಕಾರದ ಪಕ್ಷಪಾತದ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನೆಗಳನ್ನು ಎತ್ತಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರ ಹಫೀಜ್ ತಿಳಿಸಿದರು.