ಬ್ಲ್ಯಾಕ್‍ ಫಂಗಸ್‍ನ ಔಷಧಿಗೆ ತೆರಿಗೆ ಇಲ್ಲ: ಕೊರೊನ ವ್ಯಾಕ್ಸಿನ್ ಶೇ. 5 ತೆರಿಗೆ

0
353

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೊನ ಚಿಕಿತ್ಸೆಗೆ ಬಳಸುವ ಮದ್ದು ಮತ್ತು ಉಪಕರಣಗಳ ತೆರಿಗೆ ಕಡಿತಗೊಳಿಸಲಾಗಿದ್ದು ಸರಕು ಸೇವಾ ತೆರಿಗೆ ಕೌನ್ಸಿಲ್ ಸಭೆಯಲ್ಲಿ ಸೆ.30ರವರೆಗೆ ತೆರಿಗೆ ಕಡಿಮೆ ಮಾಡಲು ತೀರ್ಮಾನಿಸವಾಗಿದೆ. ಇಲೆಕ್ಟ್ರಿಕ್ ಫರ್ನಿಸ್‍ಗಳು, ಶರೀರ ಕೋಶ ಅಳೆಯುವ ಉಪಕರಣಗಳ ತೆರಿಗೆ ಕಡಿಮೆ ಮಾಡಲಾಗಿದೆ. ಆಂಬುಲೆನ್ಸ್ ಶೇ.12 ರಷ್ಟು ತೆರಿಗೆ ಇರುತ್ತದೆ. ಕೊರೊನ ವ್ಯಾಕ್ಸಿನ್‍ಗೆ ಶೇ.5 ತೆರಿಗೆ ಮುಂದುವರಿಯಲಿದೆ. ಬ್ಲ್ಯಾಕ್  ಫಂಗಸ್‍ನ ಔಷಧಿಗೆ ತೆರಿಗೆ ಇಲ್ಲ ಎಂದು ತೀರ್ಮಾನವಾಗಿದೆ.

ಆರ್ ಟಿಪಿಸಿಆರ್ ಪರೀಕ್ಷೆ ಮೆಶಿನ್, ಆರ್ ಎನ್‍ಎ ಎಕ್ಸಟ್ರಾಕ್ಷನ್ ಮೆಶಿನ್, ಜೊನೊ ಸ್ವೀನನ್ಸಿಂಗ್ ಮೆಶಿನ್ ಸಹಿತ ಈಗ ಶೇ. 18ರಷ್ಟಿರುವ ತೆರಿಗೆಯ ವಸ್ತುಗಳಿಗೆ ಕಡೆಮೆ ಮಾಡಲಾಗಿಲ್ಲ. ಜಿನೊ ಸ್ವೀಕನ್ಸಿಂಗ್ ಕಿಟ್‍ಗೆ ಶೇ. 12 ತೆರಿಗೆ ಇದೆ. ಕೊರೊನ ಪರೀಕ್ಷೆ ಕಿಟ್‍ಗಳಿಗೆ ಅಗತ್ಯವಾದ ವಸ್ತುಗಳ ತೆರಿಗೆ ಕಡಿಮೆ ಮಾಡುವುದಿಲ್ಲ. ಮದ್ದುಗಳಾದ ದಹೆಪಾರಿನ್, ರೆಮ್‍ಡಿಸಿವಿರ್ ಸಹಿತ ಶೇ 12ರಷ್ಟು ತೆರಿಗೆಯನ್ನು ಐದರಷ್ಟು ಮಾಡಿ ಸಂಕ್ಷಿಪ್ತಗೊಳಿಸಲಾಗಿದೆ. ಮೆಡಿಕಲ್ ಗ್ರೇಡ್ ಆಕ್ಸಿಜನ್, ಆಕ್ಸಿಜನ್ ಕಾನ್‍ಸ್ಟಂಟ್ರಕ್ಟರ್, ಜನರೇಟರ್, ವೆಂಟಿಲೇಟರ್, ವೆಂಟಿಲೇಟರ್ ಮಾಸ್ಕ್ ಗಳು, ಬಿಪಾಪ್ ಮೆಶಿನ್, ಹೈಫ್ಲೊ ನೋಸಲ್ ಕಾನುಲ್ ಡಿವೈಸ್‍ಗಳಿಗೆ ಇನ್ನು ಶೇ. 5ರಷ್ಟು ತೆರಿಗೆ ಇರುತ್ತದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಟೊಸಲಿಸುಮ್ಯಾಬ್, ಆಂಫೋಟೆರಿಸಿನ್ ಬಿಗಳ ತೆರಿಗೆ ತೆರವುಗೊಳಿಸಲಾಗಿದೆ.