ಕಾರು, ರಿಕ್ಷಾ ಸಹಿತ ಲಘು ವಾಹನಗಳಿಗೆ ಟೋಲ್ ಸುಂಕ ವಸೂಲು ಇಲ್ಲ: ಮಹಾರಾಷ್ಟ್ರ ಸರ್ಕಾರದ ಘೋಷಣೆ

0
84

ಸನ್ಮಾರ್ಗ ವಾರ್ತೆ

ಮುಂಬೈ ಪ್ರವೇಶಿಸುವ ಕಾರುಗಳು ಇನ್ನು ಮುಂದೆ ಟೋಲ್ ನೀಡಬೇಕಾಗಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ ಆಗಲಿದ್ದು ಅದಕ್ಕಿಂತ ಮುಂಚಿತವಾಗಿ ಜನರನ್ನು ಮರಳುಗೊಳಿಸುವುದಕ್ಕಾಗಿ ಹೀಗೆ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ ಎಂದು ಪ್ರತಿಪಕ್ಷ ಆರೋಪಿಸಿದೆ.

ಮುಂಬೈಯನ್ನು ಪ್ರವೇಶಿಸುವ 5 ಟೋಲ್ ಗಳಲ್ಲೂ ಇನ್ನು ಮುಂದೆ ಕಾರುಗಳಿಗೆ ಮತ್ತು ಲೈಟ್ ಮೋಟಾರ್ ವಾಹನಗಳಿಗೆ ಟೋಲ್ ಪಡೆಯಲಾಗುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ದಹಿಸರ್ ಆನಂದನಗರ್ ವೈಶಾಲಿ ಐರೋಲಿ ಮುಲುಂಡ್ ಮುಂತಾದ ಟೋಲ್ ಗಳಲ್ಲಿ ಇನ್ನು ಮುಂದೆ ಲಘು ವಾಹನಗಳಿಗೆ ಆರಾಮವಾಗಿ ಪ್ರವೇಶಿಸಬಹುದಾಗಿದೆ. ಈಗ ಈ ಟೋಲ್ ಗಳಲ್ಲಿ 45 ರೂಪಾಯಿಯಿಂದ 75 ರೂಪಾಯಿ ವರೆಗೆ ಟೋಲ್ ನೀಡಬೇಕಾಗಿದೆ. ಪ್ರತಿದಿನ ಈ ಟೋಲ್ ನಲ್ಲಿ 2,80,000 ದಷ್ಟು ಲಘು ವಾಹನಗಳು ಪ್ರವೇಶಿಸುತ್ತಿವೆ.

ಆದರೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮುಖ್ಯಮಂತ್ರಿ ಅವರು ಮಾಡಿರುವ ಈ ಘೋಷಣೆ ವ್ಯಾಪಕ ಚರ್ಚೆಗೂ ಒಳಗಾಗಿದೆ.