ಪಾರ್ಲಿಮೆಂಟಿನ ಕ್ಯಾಂಟಿನಿನಲ್ಲಿ ಇನ್ನು ಮುಂದೆ ಸ್ವದೇಶಿ ಉತ್ಪನ್ನಗಳು

0
439

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.1: ಪಾರ್ಲಿಮೆಂಟರಿ ಕ್ಯಾಂಟಿನ್‍ಗಳಲ್ಲಿ ಜೂನ್ 1 ರಿಂದ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಲು ನಿರ್ಧರಿಸಲಾಗಿದ್ದು, ಉತ್ಪನ್ನಗಳನ್ನು ಕೇಂದ್ರ ಅರೆಸೇನಾಪಡೆಯ ವಿಭಾಗದ ಕ್ಯಾಂಟೀನ್‍ಗಳಿಂದ ತರಿಸಿಕೊಳ್ಳಲಾಗಿದ್ದು, ಸಾವಿರಕ್ಕೂ ಹೆಚ್ಚು ಬಗೆಯ ವಿದೇಶಿ ವಸ್ತುಗಳನ್ನು ಗೃಹ ಸಚಿವಾಲಯ ತೆರವುಗೊಳಿಸಿದೆ.

ಜೂನ್ 1 ರಿಂದ ಪ್ಯಾರಾಮಿಲಿಟರಿ ಕ್ಯಾಂಟಿನ್‍ಗಳಲ್ಲಿ ದೇಶದಲ್ಲಿ ಮಾಡುವ ಉತ್ಪನ್ನಗಳಿಗೆ ಮಾರಾಟ ಅವಕಾಶ ಎಂದು ಕಳೆದ ತಿಂಗಳೇ ಕೇಂದ್ರ ಸರಕಾರ ಘೋಷಿಸಿತ್ತು. ಈ ಹಿಂದೆ ಇಲ್ಲಿ ಮೈಕ್ರೋ ಓವನ್, ಪಾದರಕ್ಷೆಗಳಿದ್ದುವು. ಇನ್ನು ಅದಿರುವುದಿಲ್ಲ. ನ್ಯೂಟ್ರೆಲ್ಲ, ಕಿಂಡರ್ ಜಾಯ್, ಟಿಕ್ ಟಾಕ್, ಹಾರ್ಲಿಕ್ಸ್ ಆಡ್ಸ್, ಯುರೆಕ್ಕ ಫೋಬ್ರ್ಸ್ ಟೋಮಿ ಹಿಲ್‍ಫಿಗರ್ ಶಟ್ರ್ಸ್ ಅಡಿಡಸ್ ಬಾಡಿ ಸ್ಪ್ರೇ ಇತ್ಯಾದಿ ಇನ್ನು ಇಲ್ಲಿ ಲಭ್ಯವಿಲ್ಲ.ಕೆಲವು ಬ್ರಾಂಡ್ ಗೃಹೋತ್ಪನ್ನಗಳು ಕೂಡ ಇಲ್ಲದಾಗುವುದು.

ಪ್ಯಾರಾ ಕ್ಯಾಂಟಿನ್ ಮೂಲಕ ವರ್ಷಕ್ಕೆ 2800 ಕೋಟಿ ರೂಪಾಯಿ ಮಾರಾಟ ನಡೆಯುತ್ತದೆ. ಪ್ಯಾರಾಮಿಲಿಟರಿ ಕ್ಯಾಂಟಿನ್ ಅನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ , ಬಾರ್ಡರ್ ಸೆಕ್ಯುರಿಟಿ ಪೋರ್ಸ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಪೋರ್ಸ್ , ಇಂಡೊ ಟಿಬೇಟಿಯನ್ ಬಾರ್ಡರ್ ಪೊಲೀಸ್, ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ ಬಳಸುತ್ತದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.